ಕಾಸರಗೋಡು: ಕೇರಳದಲ್ಲಿ ತಲೆಹೊರೆ ಕಾರ್ಮಿಕರ ಬಗ್ಗೆ ಎಡರಂಗ ಸರ್ಕಾರ ತೋರುವ ಜನವಿರೋಧಿ ನೀತಿ ಕೈಬಿಡುವಂತೆ ಆಗ್ರಹಿಸಿ ತಲೆಹೊರೆ ಮತ್ತು ಜನರಲ್ ಮಜ್ದೂರ್ ಸಂಘ್(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಯಿತು.
ಕರೊನಾ, ಪ್ರವಾಹ, ಭೂಕುಸಿತ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭ ಕೇರಳದ ಜನತೆಗಾಗಿ ಸೇವೆ ಮುಡಿಪಾಗಿರಿಸಿದ್ದ ತಲೆಹೊರೆಕಾರ್ಮಿಕರ ಬಗ್ಗೆ ಆಡಳತ-ಪ್ರತಿಪಕ್ಷ ಮುಖಂಡರು ಕೈಗೊಳ್ಳುತ್ತಿರುವ ಕಾರ್ಮಿಕ ವಿರೋಧಿ ನೀತಿ ಕೈಬಿಡಬೇಕು, ಪಿಂಚಣಿ ಮೊತ್ತ 5ಸಾವಿರಕ್ಕೇರಿಸಬೇಕು, ರಾಜ್ಯ ಮಂಡಳಿಯಲ್ಲಿ ಬಿಎಂಎಸ್ ಪ್ರಾತಿನಿಧ್ಯ ಖಚಿತಪಡಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಬಿಎಂಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಪಿ. ಬಾಲಕೃಷ್ಣನ್ ಧರಣಿ ಉದ್ಘಾಟಿಸಿದರು. ಉಪಾಧ್ಯಕ್ಷ ಎಂ ಕುಞÂಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಟಿ. ಕೃಷ್ಣನ್, ಅನಿಲ್ ಬಿ. ನಾಯರ್, ವಿ.ಬಿ. ಸತ್ಯನಾಥ, ಪಿ. ದಿನೇಶ್ ಹರೀಶ್ ಕುದ್ರೆಪಾಡಿ ುಪಸ್ಥಿತರಿದ್ದರು. ಅಣಂಗೂರು ಜಂಕ್ಷನ್‍ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿನೋದ್ ಸಿ.ಆರ್, ರವಿ, ಸಂಜೀವ ಉಪ್ಪಳ, ಸತೀಶ್ ಮಧೂರು, ಅಜಯ್ ಹೊಜದುರ್ಗ. ಕೆ.ಎ.ಶ್ರೀನಿವಾಸನ್, ರತೀಶ್ ಕೆ.ವಿ ನೇತೃಥ್ವ ನೀಡಿದರು. ಪ್ರದೀಪ್ ಕೇಳೋಟ್ ಸ್ವಾಗತಿಸಿದರು. ದಿಲೀಪ್ ಡಿಸೋಜ ವಂದಿಸಿದರು.
ಸರ್ಕಾರ ತಲೆಹೊರೆ ಕಾರ್ಮಿಕರ ಶೋಷಣೆ ಕೊನೆಗೊಳಿಸಬೇಕು: ಬಿಎಂಎಸ್
0
ನವೆಂಬರ್ 04, 2022
Tags

