HEALTH TIPS

ಗರ್ಭಕಂಠ ಕ್ಯಾನ್ಸರ್‌ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ

 

                  ನವದೆಹಲಿ: ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ನೀಡಲಾಗುವ ಲಸಿಕೆಯ (ಎಚ್‌ಪಿವಿ ಲಸಿಕೆ) ಖರೀದಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ಏಪ್ರಿಲ್‌ನಲ್ಲಿ ಜಾಗತಿಕ ಟೆಂಡರ್‌ ಆಹ್ವಾನಿಸಲು ನಿರ್ಧರಿಸಿದೆ.

            '2026ರ ವೇಳೆಗೆ, ಲಸಿಕೆಯ 16.02 ಕೋಟಿಯಷ್ಟು ಡೋಸ್‌ಗಳು ಲಭ್ಯವಾಗಬೇಕು.

ಹೀಗಾಗಿ, ಜಾಗತಿಕ ಟೆಂಡರ್‌ ಕರೆಯಲಾಗುತ್ತಿದೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಅಲ್ಲದೇ, ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಮೆರ್ಕ್‌ ಕಂಪನಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

                   9ರಿಂದ 14 ವರ್ಷ ವಯೋಮಾನದ ಬಾಲಕಿಯರಿಗೆ ಈ ಲಸಿಕೆ ನೀಡಲಾಗುತ್ತದೆ. ಅಲ್ಲದೇ, ಈ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲಾಗಿದ್ದು, ಬರುವ ಜೂನ್‌ನಲ್ಲಿ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಗುತ್ತದೆ.

                     ಎಸ್‌ಐಐ ಉತ್ಪಾದಿಸುವ ಎಚ್‌ಪಿವಿ ಲಸಿಕೆ 'ಸರ್ವಾವ್ಯಾಕ್‌' ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.24ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಎಸ್‌ಐಐ ಸಿಇಒ ಅದಾರ್‌ ಪೂನಾವಾಲಾ ಹಾಗೂ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ಪ್ರಾಧಿಕಾರದ ವ್ಯವಹಾರಗಳ ವಿಭಾಗ) ಪ್ರಕಾಶ್ ಸಿಂಗ್‌ ಈ ಸಂದರ್ಭದಲ್ಲಿ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries