ಕಾಸರಗೋಡು: 74 ನೇ ಪ್ರಜಾಪ್ರಭುತ್ವ ದಿನಾಚರಣೆ"ಯ ಅಂಗವಾಗಿ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ಯೂನಿಟ್ ವ್ಯಾಪ್ತಿಯಲ್ಲಿರುವ ಕಾಸರಗೋಡು 32 ನೇ ವಾರ್ಡಿನ ಅಂಗನವಾಡಿಗೆ ವಾರ್ಡ್ ಕೌನ್ಸಿಲರ್ ಶ್ರೀಲತಾ ಟೀಚರ್ ಹಾಗೂ ಕಾಸರಗೋಡು ಹಿರಿಯ ಫೆÇೀಟೋಗ್ರಾಫರ್ ಪ್ರಕಾಶ್ ಸ್ಟುಡಿಯೋ ಮಾಲಕ ಜಯಪ್ರಕಾಶ್ ಅವರು ಅಂಗನವಾಡಿಯ ಪುಟಾಣಿ ಮಕ್ಕಳಿಗೋಸ್ಕರ ಅಧ್ಯಾಪಿಕೆ ಪುಷ್ಪ ಅವರಿಗೆ ಫ್ಯಾನ್ ಹಸ್ತಾಂತರಿಸಿದರು.
ವಲಯ ಅಧ್ಯಕ್ಷರಾದ ವಾಸು.ಎ ಅವರು ಪ್ರಜಾಪ್ರಭುತ್ವ ಮಹತ್ವದ ಕುರಿತು ಮಾತನಾಡಿದರು.ವಾರ್ಡ್ ಕೌನ್ಸಿಲರ್ ಪ್ರಶಂಸನೆ ಮಾತುಗಳನ್ನಾಡಿ ಇತರರು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ ಚಂದ್ರಶೇಖರ, ಯೂನಿಟ್ ನೀರೀಕ್ಷಕ ನಿಯಾಸ್ , ಯೂನಿಟ್ ಕೋಶಾಧಿಕಾರಿ ಅಮಿತ್, ಸದಸ್ಯರುಗಳಾದ ಹಿರಿಯ ಫೆÇೀಟೋಗ್ರಾಫರ್ ಮೈಂದಪ್ಪ, ಸುಬ್ರಹ್ಮಣ್ಯ, ಗಣೇಶ್ ರೈ ಹಾಗೂ ಕುಟುಂಬಶ್ರೀಯ ಎ.ಡಿ.ಎಸ್ ಶಾಂತ ಮತ್ತು ವೀಣಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಯೂನಿಟ್ ಅಧ್ಯಕ್ಷ ರತೀμï ರಾಮು ವಿಡಿಯೋ ಪ್ರಾಸ್ತಾವಿಕ ನೀಡಿ ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ಯೂನಿಟ್ ಜೊತೆ ಕಾರ್ಯದರ್ಶಿ ವಿಶಾಖ್ ವಂದಿಸಿದರು.
ಎಕೆಪಿಎ ವೆಸ್ಟ್ ಯೂನಿಟ್ ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ: ಅಂಗನವಾಡಿಗೆ ನೆರವು ಹಸ್ತಾಂತರ
0
ಜನವರಿ 27, 2023

