ಕಾಸರಗೋಡು:ಜಿಲ್ಲೆಯ
ಪರಿಶಿಷ್ಟ ಜಾತಿಯ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ 'ಮಾರ್ಗದೀಪಮ್ 'ವೃತ್ತಿ
ಮಾರ್ಗದರ್ಶನ ಕಾರ್ಯಾಗಾರ ಇಂದು (ಜ.28) ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕಾಸರಗೋಡು
ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಆಡಿಟೋರಿಯಮ್ ನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ
ಬೇಬಿ ಬಾಲಕೃಷ್ಣನ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ
ಶಿನೋಜ್ ಚಾಕೋ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕಾಗಿ
ಮಾರ್ಗದರ್ಶನ ನೀಡಲು ' ಓಪನ್ ಯುವರ್ ಮೈಂಡ್ ಆಂಡ್ ಫೇಸ್ ದಿ ಎಕ್ಸಾಮ್ ವಿತ್ ಎ ಸ್ಮೈಲ್'
ಎಂಬ ವಿಷಯದ ಮೇಲೆ ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಖ್ಯಾತ ಕ್ಯಾರಿಯರ್ ಗೈಡೆನ್ಸ್
ತಜ್ಞ ಶ್ರೀಕುಮಾರ್ ಪಳ್ಳಿಯತ್ ತರಗತಿ ನಡೆಸಿಕೊಡಲಿದ್ದಾರೆ.

