ಕಾಸರಗೋಡು: ಕಾಸರಗೋಡು ವಿದ್ಯುತ್ ವಿಭಾಗದ ಅಧೀನದಲ್ಲಿರುವ ಕ್ಯಾಶ್ ಕೌಂಟರ್ ಮೂಲಕ ಮಾಸಿಕ 6 ಸಾವಿರಕ್ಕಿಂತ ಕಡಿಮೆ ಗ್ರಾಹಕರು ಹಣ ಪಾವತಿಸುವ ಮತ್ತು ಪ್ರಸ್ತುತ ಎರಡು ವಿಭಾಗದಲ್ಲಿ ಕ್ಯಾಶ್ ಕೌಂಟರ್‍ಗಳು ಕಾರ್ಯನಿರ್ವಹಿಸುತ್ತಿರುವ, ಉದುಮ, ಕುತ್ತಿಕ್ಕೋಲ್, ನೆಲ್ಲಿಕ್ಕುನ್ನು, ಕಾಸರಗೋಡು, ಮುಳ್ಳೇರಿಯ ಮತ್ತು ಬದಿಯಡ್ಕ ವಿದ್ಯುತ್ ವಿಭಾಗಗಳಲ್ಲಿ ಕೇವಲ ಒಂದು ವಿಭಾಗದಲ್ಲಿ ಮಾತ್ರ ಕ್ಯಾಶ್ ಕೌಂಟರ್ ಇರಲಿದೆ.
ಮಾರ್ಚ್ 1 ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿದೆ ಎಂದು ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ ನಾಗರಾಜ ಭಟ್ ಮಾಹಿತಿ ನೀಡಿದರು. 6000 ಕ್ಕಿಂತ ಹೆಚ್ಚು ಗ್ರಾಹಕರು ಕ್ಯಾಶ್ ಕೌಂಟರ್‍ನಲ್ಲಿ ಹಣ ಪಾವತಿಸುತ್ತಿರುವ ಚೆರ್ಕಳ ಮತ್ತು ಉಪ್ಪಳ ವಿದ್ಯುತ್ ವಿಭಾಗಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಎರಡು ವಿಭಾಗಗಳಲ್ಲಾಗಿ ಮುಂದುವರಿಯುತ್ತದೆ. ಪ್ರಸ್ತುತ ಒಂದು ವಿಭಾಗದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ವರ್ಕಾಡಿ, ಪೈವಳಿಕೆ, ಪೆರ್ಲ, ಮಂಜೇಶ್ವರ, ಕುಂಬಳೆ ಸೀತಾಂಗೋಳಿ ಮತ್ತು ಚಟ್ಟಂಚಾಲ್ ಎಂಬೀ ಸ್ಥಳಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಒಂದು ಕೌಂಟರ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು. ಲಭ್ಯವಿರುವ ಮಾನವ ಸಂಪನ್ಮೂಲ ಸಾಮಥ್ರ್ಯವನ್ನು ಇತರ ಸಾಮಾನ್ಯ ಸೇವೆಗಳಿಗೆ ವಿನಿಯೋಗಿಸಿ ಉತ್ತಮ ಸೇವೆ ನೀಡಬಹುದು ಎಂದು ವಿದ್ಯುತ್ ಮಂಡಳಿ ತಿಳಿಸಿದೆ. ಪ್ರಸ್ತುತ ವಿದ್ಯುತ್ ಮಂಡಳಿಯ ವಿದ್ಯುತ್ ಶುಲ್ಕ ಸೇರಿದಂತೆ ಹಣವನ್ನು ಆನ್ ಲೈನ್ ಮೂಲಕ, ಅಕ್ಷಯ ಕೇಂದ್ರಗಳ ಮೂಲಕ, ಜನಸೇವಾ ಕೇಂದ್ರಗಳ ಮೂಲಕ ಹಾಗೂ ಇ-ಕೇಂದ್ರದ ಮೂಲಕ ಪಾವತಿಸುವ ಸೌಲಭ್ಯವನ್ನು ವಿದ್ಯುತ್ ಮಂಡಳಿ ಸೇರಿಸಿದೆ. ಅದಲ್ಲದೆ ವಿಭಾಗದ ಮೂಲಕ ನೇರ ಪಾವತಿಗೂ ಸೌಲಭ್ಯ ಕಲ್ಪಿಸಲಾಗಿದೆ.
ವಿದ್ಯುತ್ ಮಂಡಳಿಯಲ್ಲಿ ನೇರ ಹಣ ಪಾವತಿಸುವ ಗ್ರಾಹಕರ ಸಂಖ್ಯೆಯಲ್ಲಿ ಕುಸಿತ: ಕ್ಯಾಶ್ ಕೌಂಟರ್‍ಗಳನ್ನು ಕಡಿತಗೊಳಿಸಿದ ಕೆ.ಎಸ್.ಇ.ಬಿ
0
ಫೆಬ್ರವರಿ 28, 2023


