ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಆಶ್ರಯದಲ್ಲಿ ಮಾ.04 ರಂದು ಶನಿವಾರ ಮತ್ತು 5 ರಂದು ಭಾನುವಾರ “ಕೃಷಿ ಬದುಕಿನ ಪಾಠ ಶಿಬಿರ” ಆಯೋಜಿಸಲಾಗಿದೆ. ನಮ್ಮ ಅಡಿಗೆ ಮನೆಯನ್ನು ವಿಷಮುಕ್ತಗೊಳಿಸಿ, ಶುದ್ಧ ಆರೋಗ್ಯಕರ ಆಹಾರ ತಯಾರಿಗೆ ನಾವು ಮಾಡಬಹುದಾದ ಪ್ರಯತ್ನಗಳ ಮತ್ತು ಕೃಷಿ ಸಂಬಂಧಿ ವಿಷಯಗಳ ಕುರಿತು ಆಯಾ ಕ್ಷೇತ್ರಗಳ ಸಾಧಕರು ಮಾಹಿತಿ, ಮಾರ್ಗದರ್ಶನ ನೀಡಲಿದ್ದಾರೆ.
ಮಾರ್ಚ್ 4 ರ ಬೆಳಿಗ್ಗೆ 10.00 ಕ್ಕೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈಯುವ ಮೂಲಕ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸಾವಯವ ಕೃಷಿಕ ಗ್ರಾಹಕ ಬಳಗದ ಗೌರವಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲೆಯ ನಿಕಟÀಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದು, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.. ಎಂ.ಬಿ. ಪುರಾಣಿಕ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶ್ರೀ. ಕ್ಷಿತಿ (ಕಮಲಾಕ್ಷ) ಮಂಗಳೂರು ರವರು ಶಿಬಿರಾಧಿಕಾರಿಯಾಗಿರುತ್ತಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡಕೊಳ್ಳಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರತ್ನಾಕರ :9448835606 ಅಥವಾ ಹರಿಕೃಷ್ಣ ಕಾಮತ್ : 9481390710 ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.
ಕೊಂಡೆವೂರಿನಲ್ಲಿ ಕೃಷಿ ಬದುಕಿನ ಪಾಠ ಶಿಬಿರ
0
ಫೆಬ್ರವರಿ 27, 2023

