HEALTH TIPS

ಕೋಟೆಕಣಿ: ಮಾ.6-7 : ಪ್ರತಿಷ್ಠಾ ವಾರ್ಷಿಕ ಮಹೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ



                  ಕಾಸರಗೋಡು: ಕೋಟೆಕಣಿ ಸಪರಿವಾರ ಶ್ರೀ ಅನ್ನಪೂರ್ಣೇಶ್ವರೀ ಮಹಾಕಾಳಿ ದೇವಸ್ಥಾನದ 8 ನೇ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.6 ಮತ್ತು 7 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
          ಮಾ.6 ರಂದು ಬೆಳಗ್ಗೆ 9 ಕ್ಕೆ ಸಾಮೂಹಿಕ ಪ್ರಾರ್ಥನೆ ಮತ್ತು ಗಣಪತಿ ಹೋಮ, ಅಧಿವಾಸ ಹೋಮ, 25 ಸಾನಿಧ್ಯ ಕಲಶ ಪ್ರತಿಷ್ಠೆ, 11.45 ರ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಶ್ರೀ ದೇವಿಯ ದಿವ್ಯ ದರ್ಶನ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 7 ರಿಂದ ದೀಪ ಪ್ರತಿಷ್ಠೆ, ಭಜನೆ, ರಾತ್ರಿ 8 ಕ್ಕೆ ಮಹಾಪೂಜೆ, ಶ್ರೀ ದೇವಿಯ ದಿವ್ಯ ದರ್ಶನ ಹಾಗು ಮಹಾ ಸರ್ವಾಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
         ಮಾ.7 ರಂದು ಬೆಳಗ್ಗೆ 10 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ಅನ್ನದಾನ, 2.30 ಕ್ಕೆ ಗುಳಿಗನ ಕೋಲ ನಡೆಯುವುದು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries