ಬದಿಯಡ್ಕ: ಕೇರಳ ಪ್ರೈವೇಟ್ ಪ್ರೈಮರಿ ಹೆಡ್‍ಮಾಸ್ಟರ್ಸ್ ಯೂನಿಯನ್‍ನ ಕುಂಬಳೆ ಉಪಜಿಲ್ಲಾಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ಮುಖ್ಯೋಪಾಧ್ಯಯ ವೆಂಕಟ್ರಾಜ ವಾಶೆಮನೆ ಆಯ್ಕೆಯಾದರು. ಕಾರ್ಯದರ್ಶಿಯಾಗಿ ನಾರಂಪಾಡಿ ಫಾತಿಮ ಎಎಲ್‍ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರಸಿಲ್ಲಾ ಡಿ.ಕುನ್ಹಾ, ಕೋಶಾಧಿಕಾರಿಯಾಗಿ ಬೆದ್ರಂಪಳ್ಳ ಶಾಲೆಯ ಮಹೇಶ್ ಆಯ್ಕಯಾದರು. ಉಪಾಧ್ಯಕ್ಷರಾಗಿ ಏಳ್ಕಾನ ಶಾಲೆಯ ಅಬ್ದುಲ್ ಅಸೀಸ್, ಜೊತೆಕಾರ್ಯದರ್ಶಿಯಾಗಿ ಪುತ್ತಿಗೆ ಶಾಲೆಯ ಸಿಂದು ಆರ್., ಮಹಿಳಾ ಫೋರಂನ ಅಧ್ಯಕ್ಷೆಯಾಗಿ ಉಕ್ಕಿನಡ್ಕ ಶಾಲೆಯ ಗೀತಾ, ಉಪಾಧ್ಯಕ್ಷೆಯಾಗಿ ಸ್ವರ್ಗಶಾಲೆಯ ಗೀತಕುಮಾರಿ, ಸಂಚಾಲಕಿಯಾಗಿ ಚೇಡಿಕಾನ ಶಾಲೆಯ ಸವಿತಾ ಹಾಗೂ ಸಹಸಂಚಾಲಕಿಯಾಗಿ ಕಿಳಿಂಗಾರು ಶಾಲೆಯ ವಿದ್ಯಾ ಅವರನ್ನು ಆರಿಸಲಾಯಿತು.
ಕೆಪಿಪಿಎಚ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳ ಆಯ್ಕೆ
0
ಫೆಬ್ರವರಿ 26, 2023
Tags




.jpg)
