ಬದಿಯಡ್ಕ: ಶ್ರೀ ಬೆಂಕಿನಾಥೇಶ್ವರ ಕೃಪಾಪೆÇೀಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ- ಕಳವಾರು ಮೇಳದವರಿಂದ ಫೆ.28ರಂದು ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ವಿಜಿತ್ ಕುಮಾರ್ ಶೆಟ್ಟಿ ಆಕಾಶಭವನ ವಿರಚಿತ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಂಜೆ 6.30ರಿಂದ ಕಾಲಮಿತಿಯ ಯಕ್ಷಗಾನ ಅರಂಭವಾಗಲಿದೆ. ಭಕ್ತಿಭಾವಗಳಿಂದ ಮೈನವಿರೇಳಿಸುವ ಅಭಿನಯದೊಂದಿಗೆ ಕಲಾವಿದರು ಈ ಪೌರಾಣಿಕ ಪ್ರಸಂಗಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಕ್ಷರಂಗದ ಕ್ರಾಂತಿಪುರುಷ ಡಿ.ಮನೋಹರ್ ಕುಮಾರ್, ಹಾಸ್ಯಮಾಂತ್ರಿಕ ಸಂದೇಶ್ ಬಡಗಬೆಳ್ಳೂರು ಹಾಗೂ ಇತರ ಕಲಾವಿದರು ತಮ್ಮ ಪಾತ್ರಗಳಿಗೆ ಜೀವತುಂಬಲಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.28 ರಂದು ಬದಿಯಡ್ಕದಲ್ಲಿ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
0
ಫೆಬ್ರವರಿ 26, 2023



