ಕಾಸರಗೋಡು: ತಲೆಹೊರೆ ಕಾರ್ಮಿಕರ ಮತ್ತು ಜನರಲ್ ಮಜ್ದೂರ್ ಸಂಘ (ಬಿಎಂಎಸ್) ಬ್ಯಾಂಕ್ ರಸ್ತೆ ಘಟಕದ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಬಿಎಂಎಸ್ ಸೇವಾ ಕೇಂದ್ರ ಎರ್ನಾಕುಳಂ, ನೆಹರು ಯುವ ಕೇಂದ್ರ ಸುರಕ್ಷಾ ಪ್ರಾಜೆಕ್ಟ್ ಕಾಸರಗೋಡು, ಯೇನಪೋಯ ವೈದ್ಯಕೀಯ ಕಾಲೇಜು ಮಂಗಳೂರು ವತಿಯಿಮದ ಶಿಬಿರ ಆಯೋಜಿಸಲಾಗಿತ್ತು.
ಸಂಘಟನೆ ಪ್ರಾದೇಶಿಕ ಕಾರ್ಯದರ್ಶಿ ರಿಜೇಶ್ ಜೆ. ಪಿ ನಗರ ಅವರು ಶೀಬಿರ ಉದ್ಘಾಟಿಸಿದರು. ಹೆಡ್ ಲೋಡ್ ಮತ್ತು ಜನರಲ್ ಮಸ್ದೂರ್ ಸಂಘ (ಬಿಎಂಎಸ್) ವಿಭಾಗದ ಅಧ್ಯಕ್ಷ ಕೆ.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಮುಖಂಡರಾದ ಅನಿಲ್ ಬಿ.ನಾಯರ್, ಕೆ.ಎ.ಶ್ರೀನಿವಾಸನ್, ದಿನೇಶ್ ಬಂಬ್ರಾಣ, ಎನ್‍ವೈಕೆ ಸುರಕ್ಷಾ ಯೋಜನೆಯ ಎ.ಕೆ.ಸಂಧ್ಯಾ, ಮಂಗಳೂರು ಎನಪೆÇೀಯ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ.ಹನ್ನಾ ಶಂಶುದ್ದೀನ್, ದಿವ್ಯ ಜ್ಯೋತಿ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಆರ್.ರಮೇಶ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಟಿ.ರಂಜಿತ್ ವಂದಿಸಿದರು.
ಬಿಎಂಎಸ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ
0
ಫೆಬ್ರವರಿ 26, 2023
Tags




