ಕಾಸರಗೋಡು: ಪ್ರವಾಸಿಗರಿಗಾಗಿ ಕೆಎಸ್‍ಆರ್‍ಟಿಸಿ ಸಿದ್ಧಪಡಿಸಿರುವ ಒಂದು ದಿನದ ಪ್ರವಾಸ ಕಾರ್ಯಕ್ರಮ 'ಉಲ್ಲಾಸಯಾತ್ರೆ' ಯೋಜನೆಗೆ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಬಸ್ಸಿಗೆ ಧ್ವಜ ತೋರಿಸುವ ಮುಲಕ ಚಾಲನೆ ನೀಡಿದರು. ಕೆಎಸ್ಸಾರ್ಟಿಸಿ ಡಿಪೋ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಕೆಎಸ್‍ಆರ್‍ಟಿಸಿ ಟಿಕೆಟ್ ಆದಾಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಯೋಜನೆ ಪ್ರಾರಂಭಿಸಲಾಗಿದೆ. ವಯನಾಡ್‍ಗೆ ಉಲ್ಲಾಸಯಾತ್ರೆ ಹಮ್ಮಿಕೊಳ್ಳಲಾಗಿದ್ದು, ವಯನಾಡಿನ ಜಂಗಲ್ ಸಫಾರಿ, ಎಡಕ್ಕಲ್ ಗುಹೆ, ಬಾಣಾಸುರ ಸಾಗರ್, ಕಾರ್ಲಾಡ್ ಸರೋವರ, ಹೆರಿಟೇಜ್ ಮ್ಯೂಸಿಯಂ ಮತ್ತು ಪಳಶ್ಶಿ ಸ್ಮಾರಕ ಎಂಬೀ ಸ್ಥಳಗಳನ್ನು ಸಂದರ್ಶಿಸಿ ವಾಪಸಾಗುವಂತೆ ಈ ಪ್ಯಾಕೇಜನ್ನು ಕ್ರಮೀಕರಿಸಲಾಗಿದೆ.
ಸಾಮಾನ್ಯ ಪ್ರವಾಸಿಗರಿಗೆ ಕಡಿಮೆ ವೆಚ್ಚದಲ್ಲಿ ಕೇರಳದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಕೆಎಸ್‍ಆರ್‍ಟಿಸಿ ಸುರಕ್ಷಿತ ಮತ್ತು ಸ್ವತಂತ್ರ ಪ್ರಯಾಣದ ಅನುಭವವನ್ನು ನೀಡಲಿದೆ. ಪ್ರಯಾಣಿಕರು ಕುಟುಂಬ ಮತ್ತು ಮಕ್ಕಳೊಂದಿಗೆ ಈ ಪ್ರವಾಸಗಳಲ್ಲಿ ಭಾಗವಹಿಸಬಹುದಾಗಿದೆ. ಕ್ಲಬ್‍ಗಳು, ರೆಸಿಡೆನ್ಸ್ ಅಸೋಸಿಯೇಷನ್‍ಗಳು ಮತ್ತು ಸರ್ಕಾರಿ ಸಾರ್ವಜನಿಕ ವಲಯದ ನೌಕರರಿಗೆ ಬಸ್ಸನ್ನು ಸಂಪೂರ್ಣವಾಗಿಯೂ ಬುಕ್ಕಿಂಗ್ ಸೌಲಭ್ಯದ ಮೂಲಕವೂ ಕೆ ಎಸ್ ಆರ್ ಟಿ ಸಿ ಒದಗಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೆಎಸ್ಸಾರ್ಟಿಸಿಯ 'ಉಲ್ಲಾಸ ಯಾತ್ರೆ'ಗೆ ಕಾಸರಗೋಡಿನಿಂದ ಚಾಲನೆ
0
ಫೆಬ್ರವರಿ 26, 2023
Tags





