ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್‍ನ 14ನೆರೆಕರೆ ಕೂಟಗಳಿಗೆ ಕೇರಳ ರಾಜ್ಯ ಹಿಂದುಳಿದ ವರ್ಗಗಳ ನಿಗಮದ ಮೂಲಕ 11385000 ರೂ. ಸಾಲ ನೀಡಿದೆ. ಉದುಮ ಶಾಸಕ ಸಿ.ಎಚ್.ಕುಂಞಂಬು ಸಾಲದ ಚೆಕ್ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಬಿಸಿಡಿಸಿ ಪ್ರಬಂಧಕ ಎನ್.ಎಂ ಮೋಹನನ್ ಸಾಲದ ಬಗ್ಗೆ ಮಾಹಿತಿ ನೀಡಿದರು.
ಪಂಚಾಯಿತಿ ಉಪಾಧ್ಯಕ್ಷ ಎಂ. ಮಾಧವನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಟಿ.ವರದರಾಜ್, ಪಿ.ವಸಂತಕುಮಾರಿ, ಲತಾ ಗೋಪಿ, ವಾರ್ಡು ಸದಸ್ಯೆ ಶ್ರುತಿ, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲಾನಿ, ತಾ.ಪಂ.ಸರ್ಕಾರದ ಅಭ್ಯರ್ಥಿ ಸಿ.ರಾಮಚಂದ್ರನ್, ಪಂಚಾಯಿತಿ ಕಾರ್ಯದರ್ಶಿ ಸಜಾದ್, ಡಿಎಂಸಿ ಪ್ರಭಾರಿ ಸಿ.ಎಚ್.ಇಕ್ಬಾಲ್, ಯೋಜನಾ ಸಮಿತಿ ಸದಸ್ಯ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಎಂ ಬಾಲಕೃಷ್ಣನ್, ಕುಞÂಕೃಷ್ಣನ್ ಮಾಡಕಲ್ಲ್ ಮತ್ತು ಉದಯನ್ ಚೆಂಬಕಾಡ್ ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ಗುಲಾಬಿ ಎಂ ಸ್ವಾಗತಿಸಿದರು. ಸದಸ್ಯ ಕಾರ್ಯದರ್ಶಿ ಪಿ ಜಿ ಶಿವನ್‍ಕುಟ್ಟಿ ವಂದಿಸಿದರು.
ಬೇಡಡ್ಕ-ಕುಟುಂಬಶ್ರೀ ಸಿಡಿಎಸ್ ನೆರೆಕರೆ ಕೂಟಗಳಿಗೆ ಸಾಲ ವಿತರಣೆ
0
ಮಾರ್ಚ್ 30, 2023
Tags





