ಕಾಸರಗೋಡು: ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣ ಕ್ರಾಂತಿಗೆ ಪ್ರಮುಖ ಮೈಲಿಗಲ್ಲಾಗಲಿದ್ದು, ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಎಚ್. ವೆಂಕಟೇಶ್ವರಲು ತಿಳಿಸಿದ್ದಾರೆ.
ಅವರು 'ಎನ್‍ಇಪಿ-2020: ರೋಡ್ ಮ್ಯಾಫ್ ಫಾರ್ ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಎಜುಕೇಶನ್' ಎಂಬ ವಿಷಯದಲ್ಲಿ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಬರತೀಯ ವಾಣಿಜ್ಯ ಸಂಘದ ಅಧ್ಯಕ್ಷ ಪೆÇ್ರ.ವಾಲ್ಮೀಕ ಕಚ್ರು ಸರ್ವದೆ, ಸಾರ್ವಜನಿಕ ಉದ್ದಿಮೆ ಸಂಸ್ಥೆಯ ಮಾಜಿ ನಿರ್ದೇಶಕ ಆರ್.ಕೆ. ಮಿಶ್ರಾ, ದೆಹಲಿ ಯೂನಿವರ್ಸಿಟಿ ಸ್ಕೂಲ್ ಆಫ್ ಎಕನಾಮಿಕ್ಸ್ ಡೀನ್ ಪೆÇ್ರ. ಅಜಯ್ ಕುಮಾರ್ ಸಿಂಗ್, ಉಸ್ಮಾನಿಯಾ ವಿಶ್ವವಿದ್ಯಾಲಯಪ್ರಾಧ್ಯಾಪಕ ಜಾಸ್ತಿ ರವಿಕುಮಾರ್ ಉಪಸ್ಥಿತರಿದ್ದರು. ಪೆÇ್ರ.ಬಿ.ಬಾಲಚಂದ್ರನ್ ಸ್ವಾಗತಿಸಿದರು. ಡಾ.ಎಂ.ಸಿ. ಮಿನಿಮೋಲ್ ವಂದಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಗ್ರ ಬದಲಾವಣೆ-ಉಪಕುಲಪತಿ
0
ಮಾರ್ಚ್ 30, 2023
Tags




