ಕಾಸರಗೋಡು: ಕಂದಾಯ ಸಚಿವ ಕೆ.ರಾಜನ್ ಅವರು ಮಾ. 30ರಂದು ಜಿಲ್ಲೆಯ ವಿವಿಧ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಉಳಿಯತ್ತಡ್ಕದಲ್ಲಿ ಕೂಡ್ಲು ಸ್ಮಾರ್ಟ್ ವಿಲೇಜ್ ಕಚೇರಿ, 9.45ಕ್ಕೆ ಪಟ್ಲ ಮಧೂರು ಸ್ಮಾರ್ಟ್ ವಿಲೇಜ್ ಕಚೇರಿ, 10.30ಕ್ಕೆ ಉದಯಗಿರಿ ಗೃಹ ಮಂಡಳಿ ಕಾರ್ಯನಿರತ ಮಹಿಳಾ ವಸತಿ ನಿಲಯ, 11.30ಕ್ಕೆ ನೆಲ್ಲಿಕಟ್ಟೆ ಪಾಡಿ ಸ್ಮಾರ್ಟ್ ವಿಲೇಜ್ ಕಚೇರಿ, ಮಧ್ಯಾಹ್ನ 12.30ಕ್ಕೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಪಡ್ರೆ ಸ್ಮಾರ್ಟ್ ವಿಲೇಜ್ ಕಚೇರಿ ಉದ್ಘಾಟಿಸುವರು.
ಮಧ್ಯಾಹ್ನ 3ಕ್ಕೆ ಕಾಞಂಗಾಡ್ ಸ್ಮಾರ್ಟ್ ವಿಲೇಜ್ ಕಚೇರಿ, ಹೊಸದುರ್ಗ ತಾಲೂಕು ತುರ್ತು ನಿರ್ವಹಣಾ ಕೇಂದ್ರ ಹಾಗೂ ಸಂಜೆ 4.30ಕ್ಕೆ ತುರುತ್ತಿ ಸ್ಮಾರ್ಟ್ ವಿಲೇಜ್ ಕಚೇರಿಯನ್ನು ಸಚಿವ ಕೆ.ರಾಜನ್ ಉದ್ಘಾಟಿಸಲಿದ್ದಾರೆ.
ಕಂದಾಯ ಸಚಿವ ಕೆ. ರಾಜನ್ ಜಿಲ್ಲಾ ಕಾರ್ಯಕ್ರಮ
0
ಮಾರ್ಚ್ 30, 2023
Tags




