ಬದಿಯಡ್ಕ: ಶ್ರೀರಾಮ ಭಜನಾ ಮಂದಿರದಲ್ಲಿ ಜಿ.ಎಸ್.ಬಿ ಸಮಾಜದ ವತಿಯಿಂದ ಶೋಭನಕೃತ ನಾಮ ಸಂವತ್ಸರದ ಯುಗಾದಿ ಆಚರಣೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವೇದಮೂರ್ತಿ ದಿನೇಶ. ಭಟ್ ಕುಂಬ್ಳೆ ವಹಿಸಿದ್ದರು. ಬಳಿಕ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಬಿ.ಗೋಕುಲ್ ದಾಸ್. ಪೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಭಾಗ ವಹಿಸಿದ್ದರು. ವಿವಿಧ ವಿನೋದವಳಿಯಲ್ಲಿ ವಿಜೇತರಿಗೆ ಬಹುಮಾನವನ್ನು ವಿಭಾ ಶ್ರೀನಿವಾಸ ನಾಯಕ್ ವಿತರಿಸಿದರು. ಕಾರ್ಯಕ್ರಮವನ್ನು ಸಮಾಜದ ಕಾರ್ಯದರ್ಶಿ ಜ್ಞಾನದೇವ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಖಜಾಂಚಿ ಗಣೇಶ. ಪೈ ವಂದಿಸಿದರು.
ಬದಿಯಡ್ಕ: ಯುಗಾದಿ ಆಚರಣೆ
0
ಮಾರ್ಚ್ 30, 2023
Tags

.jpg)
