HEALTH TIPS

ಪಠ್ಯಕ್ರಮದ ತರ್ಕಬದ್ಧತೆಗಾಗಿ ಎನ್‌ಸಿಇಆರ್‌ಟಿ 25 ತಜ್ಞರು,16 ಸಿಬಿಎಸ್‌ಇ ಶಿಕ್ಷಕರೊಂದಿಗೆ ಸಮಾಲೋಚಿಸಿತ್ತು: ಕೇಂದ್ರ

               ನವದೆಹಲಿ :ಕೇಂದ್ರ ಶಿಕ್ಷಣ ಸಚಿವಾಲಯವು ತಿಳಿಸಿರುವಂತೆ ಎನ್‌ಸಿಇಆರ್‌ಟಿ ತನ್ನ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲು 25 ಬಾಹ್ಯ ತಜ್ಞರು ಮತ್ತು 16 ಸಿಬಿಎಸ್‌ಇ ಶಿಕ್ಷಕರೊಂದಿಗೆ ಸಮಾಲೋಚನೆಗಳನ್ನು ನಡೆಸಿತ್ತು. ಈ ಪ್ರಕ್ರಿಯೆಯ ಭಾಗವಾಗಿ ಶಾಲಾ ಪಠ್ಯಪುಸ್ತಕಗಳಿಂದ ಮುಘಲರು,ಮಹಾತ್ಮಾ ಗಾಂಧಿ, ಅವರ ಹಂತಕ ನಾಥುರಾಮ ಗೋಡ್ಸೆ, ಹಿಂದು ಉಗ್ರವಾದಿಗಳ ಉಲ್ಲೇಖ, 2002ರ ಗುಜರಾತ ಗಲಭೆಗಳು ಮತ್ತು ವೌಲಾನಾ ಆಝಾದ್ ಸೇರಿದಂತೆ ಹಲವಾರು ಭಾಗಗಳನ್ನು ಕೈಬಿಟ್ಟಿರುವುದು ವಿವಾದವನ್ನು ಸೃಷ್ಟಿಸಿದ್ದು,ಇದು ಸೇಡಿನೊಂದಿಗಿನ 'ವೈಟ್ವಾಷ್ ' ಎಂದು ಪ್ರತಿಪಕ್ಷಗಳು ದೂಷಿಸಿವೆ.

                  ತರ್ಕಬದ್ಧತೆಯ ಭಾಗವಾಗಿ ಮಾಡಲಾದ ಬದಲಾವಣೆಗಳನ್ನು ಅಧಿಸೂಚಿಸಲಾಗಿದ್ದರೂ ಅವುಗಳಲ್ಲಿ ಕೆಲವು ವಿವಾದಾತ್ಮಕ ಅಳಿಸುವಿಕೆಗಳನ್ನು ಉಲ್ಲೇಖಿಸಲಾಗಿಲ್ಲ ಎನ್ನುವುದು ವಿವಾದದ ಕೇಂದ್ರಬಿಂದುವಾಗಿದೆ. ಇದು ಈ ಭಾಗಗಳನ್ನು ಗುಟ್ಟಾಗಿ ಕೈಬಿಡಲು ಪ್ರಯತ್ನಗಳ ಕುರಿತು ಆರೋಪಗಳಿಗೆ ಕಾರಣವಾಗಿದೆ.

                  ಕೆಲವು ಲೋಪಗಳು ಸಂಭಾವ್ಯ ಕಣ್ತಪ್ಪಿನಿಂದ ಸಂಭವಿಸಿವೆ ಎಂದು ಎನ್ಸಿಇಆರ್ಟಿ ಸಮಜಾಯಿಷಿ ನೀಡಿದೆಯಾದರೂ ಅವು ತಜ್ಞರ ಶಿಫಾರಸುಗಳನ್ನು ಆಧರಿಸಿದ್ದವು ಎಂದು ಹೇಳುವ ಮೂಲಕ ಪಠ್ಯಗಳಲ್ಲಿ ಅವುಗಳ ಮರುಸೇರ್ಪಡೆಗೆ ನಿರಾಕರಿಸಿದೆ.

               ಹೇಗಿದ್ದರೂ 2024ರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಜಾರಿಗೊಳ್ಳುವಾಗ ಪಠ್ಯಪುಸ್ತಕಗಳು ಪರಿಷ್ಕರಣಗೊಳ್ಳಲಿವೆ ಎಂದು ಅದು ಹೇಳಿಕೊಂಡಿದೆ.

                   ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಶಿಕ್ಷಣ ಸಚಿವಾಲಯವು,ಎನ್ಸಿಇಆರ್ಟಿಯು ತನ್ನ ಆಂತರಿಕ ತಜ್ಞರಲ್ಲದೆ ಸಂಶೋಧನೆ,ಅಭಿವೃದ್ಧಿ,ತರಬೇತಿ ಮತ್ತು ವಿಸ್ತರಣೆಗೆ ಸಂಬಂಧಿತ ಕ್ಷೇತ್ರಗಳಲ್ಲಿಯ ವಿವಿಗಳು/ಸಂಸ್ಥೆಗಳ ತಜ್ಞರು ಮತ್ತು ಶಿಕ್ಷಕರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿತ್ತು ಎಂದು ತಿಳಿಸಿದೆ.

                  ತೀವ್ರ ವಿವಾದಕ್ಕೆ ಒಳಗಾಗಿರುವ ಅಳಿಸುವಿಕೆಗಳು ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ್ದು,ಅದಕ್ಕಾಗಿ ಎನ್ಸಿಇಆರ್ಟಿ ಅನುಕ್ರಮವಾಗಿ ಐದು ಮತ್ತು ಇಬ್ಬರು ಬಾಹ್ಯ ತಜ್ಞರೊಂದಿಗೆ ಸಮಾಲೋಚಿಸಿತ್ತು ಎಂದು ಸಚಿವಾಲಯವು ತನ್ನ ಉತ್ತರದಲ್ಲಿ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries