ಚಂಡೀಗಢ : ಈ ವರ್ಷದ ಅಂತರರಾಷ್ಟ್ರೀಯ ಗೀತಾ ಮಹೋತ್ಸವವನ್ನು ಇದೇ 28ರಿಂದ 30ರ ವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹರಿಯಾಣ ಸರ್ಕಾರ ಹೇಳಿದೆ.
ಚಂಡೀಗಢ : ಈ ವರ್ಷದ ಅಂತರರಾಷ್ಟ್ರೀಯ ಗೀತಾ ಮಹೋತ್ಸವವನ್ನು ಇದೇ 28ರಿಂದ 30ರ ವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹರಿಯಾಣ ಸರ್ಕಾರ ಹೇಳಿದೆ.
'ಗೀತಾ ಮಹೋತ್ಸವವು ಭಗವದ್ಗೀತೆಯ ಕಾಲಾತೀತ ಜ್ಞಾನದ ಆದ್ದೂರಿ ಆಚರಣೆಯಾಗಿದೆ. ಇದನ್ನು ಹಲವು ವರ್ಷಗಳಿಂದ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಕುರುಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಕೆಲವು ವರ್ಷಗಳಿಂದ ವಿದೇಶದಲ್ಲೂ ಆಯೋಜಿಸಲಾಗುತ್ತಿದೆ' ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಮಾರಿಷಸ್, ಇಂಗ್ಲೆಂಡ್ ಮತ್ತು ಕೆನಡಾದಲ್ಲೂ ಗೀತಾ ಮಹೋತ್ಸವವು ನಡೆದಿತ್ತು. ಕುರುಕ್ಷೇತ್ರ ಅಭಿವೃದ್ಧಿ ಮಂಡಳಿ (ಕೆಬಿಡಿ) ಮತ್ತು ಆಸ್ಟ್ರೇಲಿಯಾದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಈ ಬಾರಿಯ ಕಾರ್ಯಕ್ರಮ ನಡೆಯಲಿದೆ.