HEALTH TIPS

ಮಕ್ಕಳಲ್ಲಿ ಈ ನಡವಳಿಕೆ ಕಂಡು ಬಂದರೆ ನಿರ್ಲಕ್ಷಿಸಬೇಡಿ ! ಮಾನಸಿಕ ಅಸ್ವಸ್ಥತೆ ಕಾಡುತ್ತಿರಬಹುದು!

 

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿ ಹುಟ್ಟೋದಿಲ್ಲ. ಕೆಲವರಿಗೆ ದೈಹಿಕ ಸಮಸ್ಯೆಗಳಾದರೆ ಇನ್ನೂ ಕೆಲವರಿಗೆ ಮಾನಸಿಕ ಸಮಸ್ಯೆಗಳಾಗುತ್ತದೆ. ಮಕ್ಕಳಲ್ಲಿ ದೈಹಿಕ ಸಮಸ್ಯೆ ಇದ್ದರೆ ಪೋಷಕರಿಗೆ ಸುಲಭವಾಗಿ ಗೊತ್ತಾಗುತ್ತದೆ. ಆದರೆ ಮಾನಸಿಕ ಸಮಸ್ಯೆ ಇದ್ದರೆ ಅದನ್ನು ತಿಳಿದುಕೊಳ್ಳುವುದು ತುಂಬಾನೇ ಕಷ್ಟ. ಮಕ್ಕಳು ದೊಡ್ಡವರಾಗುವವರೆಗೂ ಈ ವಿಚಾರದ ಬಗ್ಗೆ ನಮಗೆ ತಿಳಿಯೋದೇ ಇಲ್ಲ.

ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಮಾನಸಿಕ ಅಸ್ವಸ್ಥತೆಯಂತಹ ಸಮಸ್ಯೆಯಿದ್ದರೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಮಾಡಿಸಿದರೆ ಕೆಲವು ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ ದೊಡ್ಡವರಾದ ಮೇಲೆ ಕೆಲವೊಂದು ಪ್ರಕರಣಗಳಲ್ಲಿ ಸರಿ ಪಡಿಸಲಾಗದ ಹಂತವನ್ನು ತಲುಪಿಬಿಡಬಹುದು. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಈ ಸಮಸ್ಯೆಯಿದ್ದರೆ ಗುರುತಿಸೋದು ತುಂಬಾನೇ ಮುಖ್ಯವಾಗುತ್ತದೆ. ಹಾಗಾದ್ರೆ ಮಕ್ಕಳು ಮಾನಸಿಕ ಅಸ್ವಸ್ಥತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗೊತ್ತಾಗೋದು ಹೇಗೆ? ಹಾಗಾದ್ರೆ ಅದನ್ನು ಗುರುತಿಸೋದು ಹೇಗೆ ಅನ್ನೋದನ್ನ ತಿಳಿಯೋಣ.

ಮಾನಸಿಕ ಅಸ್ವಸ್ಥತೆ ಎಂದರೇನು? ಮಾನಸಿಕ ಅಸ್ವಸ್ಥತೆ ಎಂದರೆ ಮಕ್ಕಳಲ್ಲಿ ಅವರ ವಯಸ್ಸಿಗೆ ತಕ್ಕ ನಡವಳಿಕೆ ಇಲ್ಲದಿರುವುದು. ಅಂದರೆ ಉದಾಹರಣೆಗೆ ಐದು ವರ್ಷದ ಮಗುವಿಗೆ ಇರಬೇಕಾದ ಯಾವುದೇ ಗುಣಗಳು ಆ ಮಗುವಿನಲ್ಲಿ ಇಲ್ಲದಿರುವುದು. ಅಷ್ಟರ ಮಟ್ಟಿಗೆ ಆ ಮಗುವಿನ ಬುದ್ಧಿ ಬೆಳವಣಿಗೆ ಆಗಿರುವುದಿಲ್ಲ. ಐದು ವರ್ಷದ ಮಗು ಮಾಡುವ ಯಾವುದೇ ಚಟುವಟಿಕೆಗಳನ್ನು ಆ ಮಗು ಮಾಡಲು ಸಾಧ್ಯವಾಗದೇ ಇರುವುದೇ ಮಾನಸಿಕ ಅಸ್ವಸ್ಥತೆ.
ಇನ್ನೊಂದು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಮಕ್ಕಳು ಬೆಳೆದ ಮೇಲೆ ನಾವು ಗಮನಿಸಬಹುದು. ಅತಿಯಾದ ಖಿನ್ನತ ಅವರನ್ನು ಕಾಡುತ್ತಿರುತ್ತದೆ. ಬುದ್ಧಿ ಸರಿಯಾಗಿದ್ದರೂ ಅವರ ಬುದ್ಧಿ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರೋದಿಲ್ಲ. ಬದುಕಿನಲ್ಲಿ ಏನಾಗುತ್ತಿದೆ ಅನ್ನೋದೇ ಅವರಿಗೆ ತಿಳಿಯದಾಗುತ್ತದೆ. ಪೋಷಕರ ಬಳಿ ಹೇಳೋದಕ್ಕೂ ಆಗೋದಿಲ್ಲ. ಮನಸ್ಸಿನಲ್ಲೇ ಕೊರಗುತ್ತಿರುತ್ತಾರೆ.
ಮಾನಸಿಕ ಅಸ್ವಸ್ಥತೆಯನ್ನು ಗುರುತಿಸಲು ಇರುವ ಅಡೆತಡೆಗಳೇನು? ಮಕ್ಕಳಲ್ಲಿ ಉಂಟಾಗುವ ಮಾನಸಿಕ ಅಸ್ವಸ್ಥತೆಯನ್ನು ಅರ್ಥ ಮಾಡಿಕೊಳ್ಳೋದು ತುಂಬಾನೇ ಕಷ್ಟ. ಇವರು ಬೆಳವಣಿಗೆ ಸಾಮಾನ್ಯ ಮಕ್ಕಳಂತೆ ಇರುವುದಿಲ್ಲ. ಆದರೂ ಅದನ್ನು ಗುರುತಿಸುವುದು ತುಂಬಾನೇ ಕಷ್ಟ. ಮಕ್ಕಳಿಗೆ ಅದನ್ನು ತಿಳಿಸೋದಕ್ಕೆ ಸಾಧ್ಯವಾಗೋದಿಲ್ಲ. ಓದೋದಕ್ಕೆ, ಬರೆಯೋದಕ್ಕೆ ಕಷ್ಟವಾಗುತ್ತಿರುತ್ತದೆ. ಅವರ ಮೆದುಳು ಅವರ ವಯಸ್ಸಿಗೆ ತಕ್ಕ ಹಾಗೇ ಬೆಳವಣಿಗೆ ಆಗಿರೋದಿಲ್ಲ. ಇಂತಹ ಸಂದರ್ಭದಲ್ಲಿ ಪೋಷಕರಾದವರು ಮಕ್ಕಳ ಮೇಲೆ ವಿಶೇಷ ಕಾಳಜಿ ಮಾಡೋದು ತುಂಬಾನೇ ಮುಖ್ಯ. ಅವರಿಗೆ ಸರಿಯಾದ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ನೀಡಿದರೆ ಕೆಲವು ಮಕ್ಕಳಲ್ಲಿ ಈ ಸಮಸ್ಯೆ ಕೊಂಚ ಸುಧಾರಣೆ ಕಾಣುವ ಸಾಧ್ಯತೆಗಳು ಇರುತ್ತದೆ. ಆದರೆ ಅತಿಯಾದ ಸಮಸ್ಯೆ ಇದ್ದರೆ ಸರಿಪಡಿಸೋದು ತುಂಬಾನೇ ಕಷ್ಟ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಇನ್ನೂ ಕೆಲವು ಮಕ್ಕಳು ಖಿನ್ನತೆ, ಒತ್ತಡದಿಂದ ಬಳಲುತ್ತಿರುತ್ತಾರೆ. ಈ ಸಮಯದಲ್ಲಿ ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ನೀಡುವುದು ಪೋಷಕರ ಕರ್ತವ್ಯ.
ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಅಸ್ವಸ್ಥತೆಯ ವಿಧಗಳು 
1. ಆತಂಕ 
2. ಗಮನದ ಕೊರತೆ 
3. ತಿನ್ನುವ ಅಸ್ವಸ್ಥತೆ 
4. ಖಿನ್ನತೆ ಹಾಗೂ ಇತರ ಮಾನಸಿಕ ಸಮಸ್ಯೆಗಳು 
5. ಒತ್ತಡ 
6.ಸ್ಕಿಜೋಫ್ರೇನಿಯಾ (Schizophrenia) 
 ಮಕ್ಕಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಅನ್ನೋದನ್ನು ಗುರುತಿಸೋದು ಹೇಗೆ? * ಮಕ್ಕಳು ಅವರಿಗೆ ಅವರೇ ಹಾನಿ ಮಾಡಿಕೊಳ್ಳುತ್ತಾರೆ ಅಥವಾ ಬೇರೆಯವರಿಗೆ ಹಾನಿ ಮಾಡೋದಕ್ಕೂ ಹಿಂಜರಿಯೋದಿಲ್ಲ * ಕೋಪ ಬಂದಾಗ ಸಾವು ಅಥವಾ ಆತ್ಮಹತ್ಯೆಯ ಬಗ್ಗೆ ಮಾತನಾಡುತ್ತಾರೆ * ಅವರ ಮಾತು, ಕೋಪ, ನಡವಳಿಕೆ ಯಾವುದು ಕೂಡ ಅವರ ನಿಯಂತ್ರಣದಲ್ಲಿರೋದಿಲ್ಲ * ಅವರ ಸ್ವಭಾವದಲ್ಲಿ ಅನೇಕ ಬದಲಾವಣೆಗಳನ್ನುಆಗುತ್ತದೆ * ಅತಿಯಾದ ತೂಕ ಕಳೆದುಕೊಳ್ಳುತ್ತಾರೆ * ಸರಿಯಾಗಿ ನಿದ್ದೆ ಬರೋದಿಲ್ಲ * ಊಟ ಸೇರೋದಿಲ್ಲ * ಮಕ್ಕಳಲ್ಲಿ ಆಗಾಗ್ಗೆ ತಲೆನೋವು ಹಾಗೂ ಹೊಟ್ಟೆನೋವು ಕಾಣಿಸುತ್ತದೆ * ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಬದಲಾವಣೆಯಾಗುತ್ತದೆ * ಶಾಲೆಗೆ ಹೋಗೋದಕ್ಕೆ ಇಷ್ಟ ಪಡೋದಿಲ್ಲ * ಇಡೀ ದಿನ ಮಂಕಾಗಿರುತ್ತಾರೆ ಯಾರೊಂದಿಗೂ ಮಾತನಾಡಲು ಇಷ್ಟ ಪಡೋದಿಲ್ಲ * ಯಾರ ಜೊತೆಗೂ ಸೇರೋದಕ್ಕೆ ಇಷ್ಟಪಡೋದಿಲ್ಲ ಒಬ್ಬಂಟಿಯಾಗಿರುತ್ತಾರೆ
ಮಾನಸಿಕ ಅಸ್ವಸ್ಥತೆಯಂತಹ ಸಮಸ್ಯೆ ಕಂಡು ಬಂದರೆ ಏನು ಮಾಡಬೇಕು? 
ನಿಮಗೇನಾದರೂ ಮಕ್ಕಳು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ ಗೊತ್ತಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇನ್ನೂ ಮಗುವಿನ ಶಿಕ್ಷಕರು, ಸ್ನೇಹಿತರು ಎಲ್ಲರ ಜೊತೆಗೆ ಮಾತನಾಡಿಸಿ ಶಾಲೆಯಲ್ಲಿ ಅವರ ನಡವಳಿಕೆ ಹೇಗಿದೆ ಅನ್ನೋದನ್ನ ತಿಳಿಯಿರಿ. ಮನೆಯಲ್ಲಿ ಅವರು ಏನು ಮಾಡುತ್ತಾರೆ, ಹೇಗಿರುತ್ತಾರೆ ಅನ್ನೋದನ್ನು ವೈದ್ಯರಿಗೆ ತಿಳಿಸಿ. ಹೀಗೆ ಮಾಡಿದರೆ ಖಂಡಿತ ಪರಿಹಾರ ಸಿಗುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ದೇಶ ನಿರ್ಮಾಣದಲ್ಲಿ ಮಕ್ಕಳ ಪಾಲು ದೊಡ್ಡದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಿ. ಸಮಸ್ಯೆಗಳು ಕಂಡು ಬಂದರೆ ಚಿಕ್ಕಂದಿನಲ್ಲೇ ಸರಿಪಡಿಸೋದು ತುಂಬಾನೇ ಒಳ್ಳೆಯದು. ಇಲ್ಲದಿದ್ದರೆ ಮಕ್ಕಳ ಭವಿಷ್ಯವನ್ನು ನಿಮ್ಮ ಕೈಯಾರೆ ನೀವೆ ಹಾಳು ಮಾಡಿದಂತಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries