HEALTH TIPS

ಹೆಚ್ಚುತ್ತಿದೆ ಕೊರೊನಾ: ಭಾರತದಲ್ಲಿ ಶೇ. 95ರಷ್ಟು ಜನರು ಲಸಿಕೆ ಪಡೆದರೂ ಕೊರೊನಾ ಹೆಚ್ಚಾಗಲು ಕಾರಣವೇನು?

 

ಕೋವಿಡ್‌ 19 ತಂದ ಕಷ್ಟ-ನಷ್ಟ ಊಹಿಸಿದರೆ ಎಲ್ಲರ ಎದೆಯಲ್ಲಿ ನಡುಕ ಉಂಟಾಗುತ್ತದೆ. ಬಡವ-ಶ್ರೀಮಂತ ಎನ್ನದೆ ಎಲ್ಲರೂ ಕೋವಿಡ್‌ ಮಹಾಮಾರಿಗೆ ತತ್ತರಿಸಬೇಕಾಯಿತು. ಈ ಭಯಾನಕ ಕಾಯಿಲೆ ಕಣ್ಮರೆಯಾಗಿದೆ ಎಂದು ಒಂದು ವರ್ಷದಿಂದ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ.

ಹೀಗಾಗಲೆ ಸೋಂಕು ಹೆಚ್ಚುತ್ತಿದ್ದು "ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಹಿಂದಿನ ಸೋಂಕು ಉಲ್ಬಣ ಸಂದರ್ಭದಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯಗಳು ಸಹಯೋಗದ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಗಾಗಲೇ ಕೋವಿಡ್‌ 19 ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆವಹಿಸುತ್ತಿದೆ. ಭಾರತದಲ್ಲಿ XBB.1.5 ರೂಪಾಂತರ ಹರಡುತ್ತಿದ್ದು ಫೆಬ್ರವರಿಯಿಂದ ಮಾರ್ಚ್‌ಗೆ ಹೋಲಿಸಿದರೆ ಶೇ. 35.8ರಷ್ಟು ಆಸ್ಪತ್ರೆ ದಾಖಲಾತಿ ಹೆಚ್ಚಿದೆ.

ಕೇರಳ, ಮಹಾರಾಷ್ಟ್ರ, ದೆಹಲಿ ಹೀಗೆ 10ಕ್ಕಿಂತ ಅಧಿಕ ರಾಜ್ಯಗಳಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗಿದೆ. ಕೇಂದ್ರ ಸರ್ಕಾರವು . ʻಕೋವಿಡ್ ಇಂಡಿಯಾ ಪೋರ್ಟಲ್‌ʼನಲ್ಲಿ ತಮ್ಮ ಕೋವಿಡ್ ದತ್ತಾಂಶವನ್ನು ನಿಯಮಿತವಾಗಿ ನವೀಕರಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ಭಾರತದಲ್ಲಿ ಕೋವಿಡ್‌ ಲಸಿಕೆ
ಕೋವಿಡ್‌ ಲಸಿಕೆ ಡೋಸ್‌ ಅನ್ನು 10 ವರ್ಷ ಮೇಲ್ಪಟ್ಟವರು ಭಾರತದ ಶೇ. 95ರಷ್ಟು ಜನರು ಪಡೆದುಕೊಂಡಿದ್ದಾರೆ. ಇನ್ನು 12 ವರ್ಷ ಮೇಲ್ಪಟ್ಟವರಲ್ಲಿ ಶೇ.88ರಷ್ಟು ಹದಿಹರೆಯದ ಪ್ರಾಯದವರು ಕೋವಿಡ್ ಲಸಿಕೆ ಪಡೆದಿದ್ದಾರೆ.

ಕೋವಿಡ್‌ ಲಸಿಕೆ ಪಡೆದ ಮೇಲೆ ರೋಗ ನಿರೋಧಕ ಶಕ್ತಿ ಎಷ್ಟು ಸಮಯ ಇರುತ್ತದೆ?
ಈಗಾಗಲೇ ಭಾರತದ ಬಹುತೇಕ ಜನರು ಕೋವಿಡ್‌ ಲಸಿಕೆ ಪಡೆದಿದ್ದೇವೆ. ಆದ್ದರಿಂದ ಈಗ ಕೊರೊನಾ ಹೆಚ್ಚಾದರೂ ಆತಂಕವಿಲ್ಲ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಕೋವಿಡ್‌ ಎರಡು ಡೋಸ್‌ ಪಡೆದವರಲ್ಲಿ, ಬೂಸ್ಟರ್ ಪಡೆದವರಲ್ಲಿಯೂ ಇದೀಗ ಕೊರೊನಾ ಸೋಂಕು ಕಂಡು ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹಾಗಾದರೆ ನಾವು ಪಡೆದಿರುವ ಕೊರೊನಾ ಲಸಿಕೆಯ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆಯೇ? ಎಂದು ನೋಡುವುದಾದರೆ ಇದರ ಬಗ್ಗೆ ಸೂಕ್ತವಾದ ಮಾಹಿತಿ ತಜ್ಞರ ಬಳಿಯಿಲ್ಲ.

ತಜ್ಞರ ಪ್ರಕಾರ ಕೋವಿಡ್‌ ಲಸಿಕೆ ಪಡೆದ ಬಳಿಕ 6-8 ತಿಂಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ, ನಂತರ ನಿಧಾನಕ್ಕೆ ಕಡಿಮೆಯಾಗುವುದು. ಆದರೆ ಈ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ನಿಖರವಾಗಿ ಎಷ್ಟು ಸಮಯ ಇರಲಿದೆ ಎಂಬುವುದರ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಲೇ ಇವೆ. ಯಾವ ಅಧ್ಯಯನ ವರದಿಯೂ ಲಸಿಕೆ ಸಂಪೂರ್ಣವಾಗಿ ರೋಗ ನಿರೋಧಕ ಶಕ್ತಿ ನೀಡುವುದು ಎಂದು ಹೇಳಿಲ್ಲ. ಲಸಿಕೆ ಪಡೆದ 6 ತಿಂಗಳವರೆಗೆ ಕೆಲವರಲ್ಲಿದ್ದರೆ ಇನ್ನು ಕೆಲವರಲ್ಲಿ ಒಂದು ವರ್ಷ ಹಾಗೂ ಅಧಿಕಕ್ಕಿಂತ ಅಧಿಕ ಸಮಯ ಇರಲಿದೆ. ಆದ್ದರಿಂದ ಲಸಿಕೆಯಿಂದ ಪಡೆದ ರೋಗ ನಿರೋಧಕ ಶಕ್ತಿ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರಬಹುದು.

ಕೊರೊನಾ ಲಸಿಕೆ ಪಡೆದ ಒಂದು ವರ್ಷಗಳಾಗಿವೆ
ಭಾರತದ ಬಹುತೇಕ ಜನಸಂಖ್ಯೆ ಕೊರೊನಾ ಲಸಿಕೆ ಪಡೆದು ಒಂದರಿಂದ ಒಂದೂವರೆ ವರ್ಷಗಳು ಕಳೆದಿವೆ. ಆದ್ದರಿಂದ ಲಸಿಕೆಯಿಂದ ಪಡೆದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರಬಹುದು, ಆದ್ದರಿಂದ ಜನರು ಈ ಕೋವಿಡ್ ಹೆಚ್ಚುತ್ತಿರುವ ಸಮಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಈ ಕೋವಿಡ್‌ನಿಂದ ಪಾರಾಗಲು ಮಾಡಬೇಕಾದ ಮೊದಲ ರಕ್ಷಣಾ ಕಾರ್ಯವಾಗಿದೆ.

ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ
ಕೊರೊನಾ ಹೆಚ್ಚುತ್ತಿರುವ ಈ ಸಮಯದಲ್ಲಿ ಮೊದಲಿನಂತೆಯೇ ಕೊರೊನಾ ನಿಯಮಗಳನ್ನು ಪಾಲಿಸಿ.
* ಹೊರಗಡೆ ಹೋಗುವಾಗ ಡಬಲ್ ಮಾಸ್ಕ್ ಧರಿಸಿ
* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ
* ಆಫೀಸ್‌ನಲ್ಲಿ ಗಾಳಿಯಾಡುವ ಸ್ಥಳಗಳಲ್ಲಿ ಕೂರುವುದು ಹೆಚ್ಚು ಸುರಕ್ಷಿತ
* ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.
* ಶೀತ, ಕೆಮ್ಮು ಈ ಬಗೆಯ ಲಕ್ಷಣಗಳು ಕಂಡು ಬಂದರೆ ಹೊರಗಡೆ ಸುತ್ತಾಡಬೇಡಿ, ಮನೆಯಲ್ಲೂ ಐಸೋಲೇಟ್‌ ಆಗಿದ್ದು ಮನೆಯವರಿಗೆ ಕಾಯಿಲೆ ಹರಡುವುದನ್ನು ತಡೆಗಟ್ಟಿ.
* ಜನರ ಗುಂಪು ಇರುವ ಕಡೆ ಹೋಗಬೇಡಿ.
ಕೋವಿಡ್ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆವಹಿಸಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries