HEALTH TIPS

ವಿಶ್ವ ಪುಸ್ತಕ ದಿನ: ಓದುಗರ ಪ್ರೇರೇಪಿಸಲು ಪೆಂಗ್ವಿನ್ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ

                  ವದೆಹಲಿ: ವಿಶ್ವ ಪುಸ್ತಕ ದಿನ ಆಚರಿಸುವ ದಿನದಂದೇ ಖ್ಯಾತ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ರ‍್ಯಾಂಡಮ್ ಹೌಸ್‌ ಇಂಡಿಯಾವು ಸಾಹಿತ್ಯ ಕೃತಿಗಳನ್ನು ಓದುವಂತೆ ಜನರನ್ನು ಪ್ರೇರೇಪಿಸಲು ಭಾನುವಾರ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

                  'ಫಿಕ್ಷನ್‌ಅಡಿಕ್ಷನ್' ಹೆಸರಿನ ಈ ಕಾರ್ಯಕ್ರಮದಡಿ, ಕಥೆ, ಕಾದಂಬರಿಗಳು ಸೇರಿದಂತೆ ಉತ್ತಮ ಪ್ರಕಾರದ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಲು ಓದುಗರಿಗೆ ಉತ್ತೇಜನ ನೀಡಲು ಸಂಸ್ಥೆ ಮುಂದಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ 10 ಕೃತಿಗಳನ್ನು ಸಂಸ್ಥೆ ಪಟ್ಟಿ ಮಾಡಿದೆ. ಈ ಪ್ರಕಾರದ ಸಾಹಿತ್ಯ ಕೃತಿಗಳನ್ನು ಓದಲು ತೊಡಗುವುದಕ್ಕೆ ಮುಂದಾದವರಿಗೆ ಇವು ಯೋಗ್ಯವಾಗಿವೆ ಎಂದು ಸಂಸ್ಥೆ ಹೇಳಿದೆ.

                   ಸಮಕಾಲೀನ ವಿಷಯಗಳ ಕುರಿತ ಪುಸ್ತಕಗಳಿಂದ ಹಿಡಿದು ಸಾಹಿತ್ಯ ಶೃಂಗಾರ, ರೋಮಾಂಚಕ ಕಥಾವಸ್ತುವುಳ್ಳ ಪುಸ್ತಕಗಳನ್ನು ಈ ಪಟ್ಟಿ ಒಳಗೊಂಡಿದೆ.

               'ಪೆಂಗ್ವಿನ್‌ ರೀಡಿಂಗ್‌ ರೂಮ್‌' ಎಂಬ ವರ್ಚುವಲ್ ವಿಧಾನದ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಖ್ಯಾತ ನಾಮರನ್ನು ಆಹ್ವಾನಿಸಲಾಗುತ್ತಿದ್ದು, ಅವರು ತಮ್ಮ ನೆಚ್ಚಿನ ಕೃತಿಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮ ಪ್ರತಿ ತಿಂಗಳ ಅಂತ್ಯಕ್ಕೆ ನಡೆಯಲಿದ್ದು, ಸಂಸ್ಥೆ ಮಾಡಿರುವ ಪಟ್ಟಿಯಲ್ಲಿನ 10 ಪುಸ್ತಕಗಳ ಪೈಕಿ ಒಂದು ಕೃತಿಯನ್ನು ಓದುವರು. ಈ ಕಾರ್ಯಕ್ರಮವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

                  ಹಲವಾರು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಓದುಗರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ ಎಂದೂ ಸಂಸ್ಥೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries