ತಿರುವನಂತಪುರ: ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.
ಈ ವರ್ಷ ಶೇ 82.95ರಷ್ಟು ಉತ್ತೀರ್ಣರಾಗಿದ್ದಾರೆ. ಈ ವರ್ಷ 4,32,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 33,815 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. 77 ಶಾಲೆಗಳು 100 ಶೇ. ಉತ್ತೀರ್ಣತೆ ದಾಖಲಿಸಿದೆ. ಎರ್ನಾಕುಳಂ ಜಿಲ್ಲೆ ಅತ್ಯಧಿಕ ಉತ್ತೀರ್ಣತೆ ಮತ್ತು ಪತ್ತನಂತಿಟ್ಟ ಜಿಲ್ಲೆ ಕಡಿಮೆ ಶೇಕಡಾವಾರು ಉತ್ತೀರ್ಣತೆಯನ್ನು ಹೊಂದಿದೆ.
ವಿಜ್ಞಾನ ವಿಭಾಗದಲ್ಲಿ 87.31 ಶೇ, ಮಾನವಿಕ ವಿಭಾಗದಲ್ಲಿ 71.93 ಶೇ. ಮತ್ತು ವಾಣಿಜ್ಯದಲ್ಲಿ 82.75 ಶೇ. ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತೀರ್ಣರ ಪ್ರಮಾಣ ಕಡಿಮೆಯಾಗಿದೆ.
ಸೇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 29 ಆಗಿದೆ. ಸೇ. ಪರೀಕ್ಷೆಗಳು ಜೂನ್ 21 ರಿಂದ ಪ್ರಾರಂಭವಾಗುತ್ತವೆ.
ಸಂಜೆ 4 ಗಂಟೆಯಿಂದ ವೆಬ್‍ಸೈಟ್‍ಗಳು ಮತ್ತು ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಫಲಿತಾಂಶಗಳು ಲಭ್ಯವಿದೆ. ಕಳೆದ ವರ್ಷ ಉತ್ತೀರ್ಣರ ಪ್ರಮಾಣವು ಪ್ಲಸ್ಡುಗೆ 83.87 ಶೇ. ಮತ್ತು ವಿಎಚ್‍ಎಸ್‍ಇಗೆ 76.78 ಶೇ. ಆಗಿತ್ತು. ಫಲಿತಾಂಶ ತಿಳಿಯಲು ಈ ವೆಬ್‍ಸೈಟ್‍ಗಳಿಗೆ ಭೇಟಿ ನೀಡಿ: :www.keralaresults.nic.in, www.prd.kerala.gov.in, www.result.kerala.gov.in, www.examresults.kerala.gov.in, www.results.kite.kerala.gov.in


