HEALTH TIPS

25 ವರ್ಷದ ನಂತರ ಎತ್ತರವಾಗಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ಟಿಪ್ಸ್

 ಪ್ರತಿಯೊಬ್ಬರಿಗೂ ಎತ್ತರವಾಗಿರ್ಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆದರೆ ಅದ್ರಲ್ಲಿ ಕೆಲವರು ಮಾತ್ರ ಎತ್ತರ ಇರುತ್ತಾರೆ. ಇನ್ನೂ ಕೆಲವರು ಕುಳ್ಳಗಿರುತ್ತಾರೆ. ಎತ್ತರವಾಗಿದ್ರೆ ಆಕರ್ಷಕವಾಗಿ ಕಾಣಬಹುದು ಎಂಬ ಆಸೆ ಖಂಡಿತ ಎಲ್ಲರಿಗೂ ಇದೆ. ಆದರೆ ಒಂದು ವಯಸ್ಸಿನವರೆಗೂ ಮಾತ್ರ ನಾವು ಬೆಳೆಯುತ್ತೀವಿ. ಆ ನಂತರ ನಮ್ಮ ಬೆಳವಣಿಗೆ ಆಗೋದಿಲ್ಲ. ನಿಮಗೊತ್ತಾ 25 ವಯಸ್ಸಿನ ನಂತರವೂ ನಮ್ಮ ಎತ್ತರವನ್ನು ಹೆಚ್ಚಿಸಬಹುದಂತೆ. ಅಷ್ಟಕ್ಕು 25 ವರ್ಷದ ನಂತರ ಎತ್ತರ ಹೆಚ್ಚಿಸೋದಕ್ಕೆ ಸಾಧ್ಯನಾ? ತಿಳಿಯೋಣ.

ಎತ್ತರ ಹೆಚ್ಚಾಗೋದು ನಿಲ್ಲೋದ್ಯಾಕೆ? 
ಮಹಿಳೆಯರಲ್ಲಿ 18 ವರ್ಷ ವಯಸ್ಸಿನವರೆಗೆ ಮತ್ತು ಪುರುಷರಲ್ಲಿ 24 ವರ್ಷ ವಯಸ್ಸಿನವರೆಗೆ ಎತ್ತರ ಹೆಚ್ಚಾಗುತ್ತದೆ. ಪ್ರೌಢಾವಸ್ಥೆಗೆ ಬಂದ ನಂತರ ಈ ಹಾರ್ಮೋನುಗಳ ಉತ್ಪಾದನೆಯು ನಿಧಾನವಾಗಿ ನಿಲ್ಲುವುದರಿಂದ ಆ ಮೇಲೆ ಎತ್ತರ ಹೆಚ್ಚಾಗೋದು ಕಷ್ಟ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಒಂದು ವಯಸ್ಸು ದಾಟಿದ ನಂತರ ಬೆಳವಣಿಗೆಯ ಹಾರ್ಮೋನ್ (HGH), ಥೈರಾಯ್ಡ್ ಹಾರ್ಮೋನುಗಳು ಮತ್ತು ಲೈಂಗಿಕ ಹಾರ್ಮೋನುಗಳಂತಹ ಹಾರ್ಮೋನುಗಳು ಬೆಳವಣಿಯನ್ನು ನಿಯಂತ್ರಿಸುತ್ತದೆ.

25 ವರ್ಷದ ನಂತರ ಎತ್ತರ ಹೆಚ್ಚಾಗುವಂತೆ ಮಾಡೋದು ಹೇಗೆ?
25 ವರ್ಷ ವಯಸ್ಸಿನ ನಂತರ ಎತ್ತರವನ್ನು ಹೆಚ್ಚಾಗುವಂತೆ ಮಾಡುವುದು ನಿಜವಾಗಿಯೂ ಕಷ್ಟ. ಪ್ರಾಥಮಿಕವಾಗಿ ಈ ವಯಸ್ಸಿನಲ್ಲಿ ಮೂಳೆಗಳು ಬೆಳೆಯುವುದು ನಿಲ್ಲುತ್ತದೆ. ಇನ್ನೂ ವಯಸ್ಕರಲ್ಲಿ ಎತ್ತರ ಹೆಚ್ಚಾಗೋದಕ್ಕೆ ಕೆಲವೊಂದು ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದರಿಂದ ಕೆಲವೊಂದು ಅಡ್ಡ ಪರಿಣಾಮಗಳು ಇರುತ್ತದೆ. ಆದರೆ ಶಸ್ತ್ರ ಚಿಕಿತ್ಸೆಯಿಂದ 20, 21, 22 ಮತ್ತು 25 ವರ್ಷಗಳ ನಂತರ ಎತ್ತರವನ್ನು ಹೆಚ್ಚು ಮಾಡಬಹುದು. ಆದರೆ ಕೆಲವೊಂದು ಮನೆ ಮದ್ದುಗಳನ್ನು ಅನುಸರಿಸೋದ್ರ ಮೂಲಕ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಎತ್ತರವನ್ನು ಹೆಚ್ಚು ಮಾಡಬಹುದು.

1. ಸರಿಯಾದ ಆಹಾರ ಮತ್ತು ಪೋಷಣೆ
ಪೋಷಕಾಂಶಯುಕ್ತ ಆಹಾರ ನಿಮ್ಮ ಎತ್ತರವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳನ್ನು ಸೇವಿಸೋದ್ರಿಂದ ಬೆಳವಣಿಗೆ ಮತ್ತು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ, ವಿಟಮಿನ್ ಡಿ, ರಂಜಕ, ಅಯೋಡಿನ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಸಮತೋಲಿತ ಆಹಾರವು ಸರಿಯಾದ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ.

ಇನ್ನೂ ವಿಶೇಷವಾಗಿ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳ ಸೇವನೆಯನ್ನು ನಿರ್ಬಂಧಿಸಬೇಕು ಏಕೆಂದರೆ ಅವುಗಳು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತವೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತವೆ. ಆರೋಗ್ಯಕರ ಬೆಳವಣಿಗೆ ಮತ್ತು ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಅಮೈನೋ ಆಮ್ಲಗಳು ಮತ್ತು ಕ್ಯಾಲ್ಸಿಯಂ ಅನ್ನು ಪಡೆಯಲು ಇವುಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

2. ಸೂರ್ಯನ ಬೆಳಕಿಗೆ ಮೈಯೊಡ್ಡಿ
ಸೂರ್ಯನ ಬೆಳಕು ವಿಟಮಿನ್ ಡಿ ಯ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ವಿಟಮಿನ್ ಡಿ ಯ ಸೇವನೆ ಮೂಳೆಯ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ದೇಹವು ವಿಟಮಿನ್ ಡಿ ಯ ಅಗತ್ಯ ಪ್ರಮಾಣವನ್ನು ಪಡೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮುಂಜಾನೆ ಅಥವಾ ಸಂಜೆಯ ಸಮಯದಲ್ಲಿ ಸೂರ್ಯನ ಕಿರಣ ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ಸೂರ್ಯನ ವಿಕಿರಣವು ಕಡಿಮೆ ಇರುತ್ತದೆ.

3. ಸ್ಟ್ರೆಚಿಂಗ್ ಮತ್ತು ವ್ಯಾಯಾಮ
ಉತ್ತಮ ಎತ್ತರವನ್ನು ಪಡೆಯಲು ವ್ಯಾಯಾಮವು ಅತ್ಯಂತ ಮಹತ್ವದ್ದಾಗಿದೆ. ವ್ಯಾಯಾಮ ಮಾಡಿದಾಗ ನಮ್ಮ ದೇಹದ ಬೆಳವಣಿಗೆ ವಿಸ್ತರವಾಗುತ್ತದೆ. ವ್ಯಾಯಾಮವು ಬೆಳವಣಿಗೆಯ ಹಾರ್ಮೋನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಈ ವ್ಯಾಯಾಮಗಳು ನಿಮ್ಮ ಭಂಗಿಯನ್ನು ಸುಧಾರಿಸುತ್ತದೆ ಮತ್ತು ಕನಿಷ್ಠ ಒಂದು ಇಂಚು ಎತ್ತರದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ವ್ಯಾಯಾಮದ ಹೊರತಾಗಿ, ಸೈಕ್ಲಿಂಗ್ ಮತ್ತು ಈಜು ಮುಂತಾದ ಕ್ರೀಡಾ ಚಟುವಟಿಕೆಗಳು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಈ ವ್ಯಾಯಾಮಗಳು 25 ವರ್ಷಗಳ ನಂತರ ಸ್ವಲ್ಪ ಎತ್ತರವನ್ನು ಪಡೆಯಲು ಸಹಾಯಕವಾಗಬಹುದು.
* ಫಾರ್ವಡ್ ಬೆಂಡ್
* ಸ್ಪಾಂಟ್ ಹೈ ಜಂಪ್
* ರೋಪ್ ಜಂಪಿಂಗ್
* ಬರ್ಪಿಸ್
* ಬಾರ್ ಹ್ಯಾಂಗಿಂಗ್

4. ಯೋಗ
ನಿಯಮಿತ ವ್ಯಾಯಾಮದ ಹೊರತಾಗಿ ಯೋಗಾಭ್ಯಾಸವು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಇದು ನಿಮ್ಮ ದೇಹದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಮತ್ತು ಬೆಳವಣಿಗೆಯ ಹಾರ್ಮೋನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ವಿವಿಧ ಯೋಗ ಭಂಗಿಗಳನ್ನು ಮಾಡುವುದರ ಮೂಲಕ ಇದು ನಿಮ್ಮ ದೇಹದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಯಾವೆಲ್ಲಾ ಆಸನಗಳು 25 ರ ನಂತರ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಅನ್ನೋದನ್ನು ತಿಳಿಯೋಣ.
* ತದಾಸನ
* ಭುಜಂಗಾಸನ
* ಅಧೋಮುಕ ಶ್ವಾನಾಸನ
* ತ್ರಿಕೋನಾಸನ
* ಸರ್ವಾಂಗಾಸನ

5. ನಿದ್ರೆ
ಮನುಷ್ಯ ಆರೋಗ್ಯವಾಗಿರಬೇಕೆಂದರೆ ನಿದ್ರೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತಿರುತ್ತದೆ. ನೀವು ಆಳವಾದ ನಿದ್ದೆ ಮಾಡುವುದರಿಂದ ನಿಮ್ಮ ಮೂಳೆಗಳನ್ನು ದಪ್ಪವಾಗಿಸುವ ಮತ್ತು ಉದ್ದಗೊಳಿಸುವ ಕೆಲಸವನ್ನು ಮಾಡುತ್ತದೆ. ಹೀಗಾಗಿ ದಿನ ನಿತ್ಯ ಸಂಪೂರ್ಣ ನಿದ್ದೆಯ ಅವಶ್ಯಕತೆಯಿದೆ. ಎತ್ತರದ ಹಾರ್ಮೋನಿನ ಬೆಳವಣಿಗೆಗೆ ವ್ಯಾಯಾಮದ ಜೊತೆಯಲ್ಲಿ ಆಳವಾದ ನಿದ್ದೆಯೂ ಅವಶ್ಯಕವಾಗಿದೆ.

25 ವಯಸ್ಸಿನ ನಂತರ ಮನುಷ್ಯನ ಬೆಳವಣಿಗೆ ಸಾಧ್ಯವೇ ಇಲ್ಲ ಎಂದು ವೈದ್ಯರು ಕೂಡ ಹೇಳುತ್ತಾರೆ. ಆದರೆ ಕೆಲವೊಂದು ವಿಧಾನಗಳನ್ನು ಅನುಸರಿಸೋದ್ರ ಮೂಲಕ ಕೊಂಚ ಎತ್ತರ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

                                      ಮನವಿ:

              ಸನ್ಮನಸ್ಸಿನ ಓದುವರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ. 

       ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:

                 ಗೂಗಲ್ ಪೇ: 7907952070

                 ಬ್ಯಾಂಕ್ ವಿವರ: CANARA BANK

                                                  BADIYADKA BRANCH
                                      A/c NUMBER: 0611101029775
                                     IFSC: CNRB0004489
     ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries