ನವದೆಹಲಿ: ಪ್ರತಿಕೂಲ ಹವಾಮಾನ ಸಂದರ್ಭಗಳನ್ನು ನಿಖರವಾಗಿ ಅಂದಾಜು ಮಾಡಬಹುದು ಎನ್ನಲಾದ ಹೊಸ ಸೂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಮೋಡ ದಟ್ಟಣೆಯ ಸ್ವರೂಪವನ್ನು ಆಧರಿಸಿ ಈ ಸೂತ್ರ ಫಲಿತಾಂಶ ನೀಡಲಿದೆ. ಈಗ ಅನುಸರಿಸುತ್ತಿರುವ ಮಾನದಂಡಗಳಲ್ಲಿ ನಿಖರ ಅಂದಾಜು ಸಾಧ್ಯ ಆಗುತ್ತಿರಲಿಲ್ಲ.
ನವದೆಹಲಿ: ಪ್ರತಿಕೂಲ ಹವಾಮಾನ ಸಂದರ್ಭಗಳನ್ನು ನಿಖರವಾಗಿ ಅಂದಾಜು ಮಾಡಬಹುದು ಎನ್ನಲಾದ ಹೊಸ ಸೂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಮೋಡ ದಟ್ಟಣೆಯ ಸ್ವರೂಪವನ್ನು ಆಧರಿಸಿ ಈ ಸೂತ್ರ ಫಲಿತಾಂಶ ನೀಡಲಿದೆ. ಈಗ ಅನುಸರಿಸುತ್ತಿರುವ ಮಾನದಂಡಗಳಲ್ಲಿ ನಿಖರ ಅಂದಾಜು ಸಾಧ್ಯ ಆಗುತ್ತಿರಲಿಲ್ಲ.
ಮೋಡ ದಟ್ಟಣೆಯ ಸ್ವರೂಪದಿಂದ ಮಳೆಯ ತೀವ್ರತೆಯನ್ನು ಗುರುತಿಸಬಹುದು. ಇದನ್ನು ಆಧರಿಸಿ ಪ್ರತಿಕೂಲ ಹವಾಮಾನ ಸ್ಥಿತಿಯನ್ನು ಮುಂದಾಗಿ, ಖಚಿತವಾಗಿ ಅಂದಾಜು ಮಾಡಬಹುದು ಸಂಶೋಧಕರು ತಿಳಿಸಿದ್ದಾರೆ.
ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ 'ಲೀಪ್' ಸೆಂಟರ್ನ ನಿರ್ದೇಶಕ ಪಿಯರ್ ಜೆಂಟೈನ್ ಅವರು, ಚಂಡಮಾರುತ ನಿಗ್ರಹ ಸಿಮ್ಯುಲೇಷನ್ ಮತ್ತು ಯಾಂತ್ರಿಕ ಮಾನದಂಡ ಅನುಸರಿಸಿ ಹೊಸ ಸೂತ್ರ ರೂಪಿಸಿದ್ದಾರೆ. ನ್ಯಾಷನಲ್ ಅಕಾಡೆಮಿ ಆಪ್ ಸೈನ್ಸ್ ನಿಯತಕಾಲಿಕದಲ್ಲಿ ಈ ವಿವರಗಳು ಪ್ರಕಟಗೊಂಡಿವೆ.
ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿರುವ ಈಗಿನ ಹೊತ್ತಿನಲ್ಲಿ ಹವಾಮಾನ ಸ್ಥಿತಿಗತಿಯನ್ನು ನಿಖರವಾಗಿ ಅಂದಾಜು ಮಾಡುವುದು ಈಗಿನ ಅಗತ್ಯವಾಗಿದೆ. ಹವಾಮಾನ ಮುನ್ಸೂಚನೆಗೂ ಇದು ಪೂರಕವಾಗಿದೆ.
ನಮ್ಮ ಸಂಶೋಧನೆಯೂ ಮಹತ್ವದ್ದಾಗಿದೆ. ಹವಾಮಾನ ಅಂದಾಜು ಮಾಡಲು ಮೋಡದಟ್ಟಣೆ ಪರಿಗಣಿಸಬೇಕೇ, ಬೇಡವೇ ಎಂಬ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಚರ್ಚಿಸಿದ್ದರು ಎಂದು ಜೆಂಟೈನ್ ಅವರು ಪ್ರತಿಕ್ರಿಯಿಸಿದರು.
ಮನವಿ:
ಸನ್ಮನಸ್ಸಿನ ಓದುವರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.