ತಿರುವನಂತಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ತಿಳಿಸಿದ್ದಾರೆ.
20ರಂದು ಘೋಷಣೆ ಮಾಡುವುದಾಗಿ ಈ ಹಿಂದೆ ಪ್ರಕಟಿಸಲಾಗಿತ್ತು.
ಸಚಿವ ವಿ ಶಿವನ್‍ಕುಟ್ಟಿ ಅವರ ಫೇಸ್‍ಬುಕ್ ಪೋಸ್:್ಟ
ಈ ವರ್ಷ 4,19,362 ಸಾಮಾನ್ಯ ವಿದ್ಯಾರ್ಥಿಗಳು ಮತ್ತು 192 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 2,13,801 ಬಾಲಕರು ಮತ್ತು 2,05,561 ಬಾಲಕಿಯರು. ಸರ್ಕಾರಿ ವಲಯದಲ್ಲಿ 1,170 ಕೇಂದ್ರಗಳು, ಅನುದಾನಿತ ವಲಯದಲ್ಲಿ 1,421 ಪರೀಕ್ಷಾ ಕೇಂದ್ರಗಳು ಮತ್ತು ಅನುದಾನರಹಿತ ವಲಯದಲ್ಲಿ 369 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 2,960 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಗಲ್ಫ್ ಪ್ರದೇಶದಲ್ಲಿ 518 ವಿದ್ಯಾರ್ಥಿಗಳು ಮತ್ತು ಲಕ್ಷದ್ವೀಪದ ಒಂಬತ್ತು ಶಾಲೆಗಳಲ್ಲಿ 289 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷದ ಫಲಿತಾಂಶ ನಾಳೆ ಅಪರಾಹ್ನ ಪ್ರಕಟಿಸಲಾಗುವುದು.




.jpeg)
