ರಕ್ತದೊತ್ತಡ ಎಂಬುವುದು ಇಂದಿನ ದಿನಗಳಲ್ಲಿ ಬಹುತೇಕ ಮಧ್ಯ ವಯಸ್ಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರಿಗೆ ಈ ಸಮಸ್ಯೆ ಯೌವನ ಪ್ರಾಯದಲ್ಲಿಯೇ ಬರುತ್ತಿದೆ. ಇದೊಂದು ಸೈಲೆಂಟ್ ಕಿಲ್ಲರ್, ನಿರ್ಲಕ್ಷ್ಯ ಮಾಡಿದರೆ ದೊಡ್ಡ ಸಮಸ್ಯೆನೇ ಉಂಟಾಗುವುದು. ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಅದನ್ನು ನಿಯಂತ್ರಣದಲ್ಲಿಡಬೇಕು, ಇಲ್ಲದಿದ್ದರೆ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಕಾಯಿಲೆಯ ಅಪಾಯ ಅಧಿಕ.
ರಕ್ತದೊತ್ತಡ ಎಷ್ಟಿದೆ ಎಂದು ತಿಳಿಯಲು ಪದೇ ಪದೇ ಆಸ್ಪತ್ರೆಗೆ ಹೋಗಬೇಕಾಗಿಲ್ಲ, ನೀವು ಮನೆಯಲ್ಲಿಯೇ ಮಾನಿಟರ್ ಮಾಡಬಹುದು, ಆದರೆ ಮನೆಯಲ್ಲಿ ರಕ್ತದೊತ್ತಡ ಪರೀಕ್ಷೆ ಮಾಡುವವರು ಈ ಅಂಶಗಳನ್ನು ತಿಳಿದಿದ್ದರೆ ಒಳ್ಳೆಯದು
ಎರಡೂ ಕೈಗಳಲ್ಲಿ ವ್ಯತ್ಯಾಸ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ
ಸಾಮಾನ್ಯವಾಗಿ ಬಲಗೈ ಒಂದು ಸಂಖ್ಯೆಯ ರಕ್ತದೊತ್ತಡ ತೋರಿಸಿದರೆ ಎಡಗೈ ಮತ್ತೊಂದು ಸಂಖ್ಯೆಯ ರಕ್ತದೊತ್ತಡ ರಕ್ತದೊತ್ತಡ ತೋರಿಸುವುದು ಸಹಜ, ಆದರೆ ತುಂಬಾ ವ್ಯತ್ಯಾಸ ತೋರಿಸುವುದಾದರೆ ನಿರ್ಲಕ್ಷ್ಯ ಮಾಡಬೇಡಿ.
ಕಫ್ ಸೈಜ್ ಸರಿಯಾಗಿರಲಿ: ಸರಿಯಾದ ಅಳತೆ ಗೊತ್ತಾಗ ಬೇಕಾದರೆ ಕಫ್ ಸೈಜ್ ತುಂಬಾ ಬಿಗಿಯಾಗಿಯೂ ಇರಬಾರದು, ತುಂಬಾ ಸಡಿಲವಾಗಿಯೂ ಇರಬಾರದು. ನೀವು ಬಟ್ಟೆಯ ಮೇಲೆ ಇಡಬೇಡಿ, ತ್ವಚೆಯ ಮೇಲೆ ಇಟ್ಟು ಬಿಗಿಗೊಳಿಸಿ.
* ನೀವು ಬಿಪಿ ಚೆಕ್ ಮಾಡುವ ಅರ್ಧ ಗಂಟೆಯ ಮುನ್ನ ಕಾಫಿ ಸೇವಿಸಬೇಡಿ, ಅಲ್ಲದೆ ತುಂಬಾ ವಿಶ್ರಾಂತಿ ತೆಗೆದುಕೊಂಡು ನಂತರ ಬಿಪಿ ಪರೀಕ್ಷೆ ಮಾಡಿಸಬೇಕು. ಅಲ್ಲದೆ ಕಫ್ ಅನ್ನು ಕೈಗೆ ಬಿಗಿಯಾಗಿ ಮಾಡಬೇಡಿ, ತುಂಬಾ ಬಿಗಿಯಾಗಿದ್ದರೆ ಸರಿಯಾದ ಅಳತೆ ಸಿಗುವುದಿಲ್ಲ.
ಬಿಪಿ ಚೆಕ್ ಮಾಡುವವರಿಗೆ 5 ಟಿಪ್ಸ್
ವಿಶ್ರಾಂತಿಯಿಂದ ಇರಿ: ಬಿಪಿ ಪರೀಕ್ಷೆ ಮಾಡುವ 10 ನಿಮಿಷ ಮುನ್ನ ಯಾವುದೇ ಕೆಲಸ ಮಾಡದೆ, ಯಾವುದೇ ಆತಂಕಕ್ಕೆ ಒಳಗಾಗದೆ ಆರಾಮವಾಗಿ ಇರಿ.
* ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಿ: ನೀವು ಬೆಳಗ್ಗೆ 5-6 ಗಂಟೆಯ ಒಳಗಡೆ ಪರೀಕ್ಷೆ ಮಾಡಿದರೆ ರೇಟ್ ಅಧಿಕ ತೋರಿಸುವುದು, ಆದ್ದರಿಂದ ಸ್ವಲ್ಪ ಹೊತ್ತಿನ ಬಳಿಕ ಮತ್ತೊಮ್ಮೆ ಪರೀಕ್ಷಿಸಿ. ಪ್ರತೀದಿನ ಒಂದೇ ಸಮಯದಲ್ಲಿ ಪರೀಕ್ಷೆ ಮಾಡುವುದು ಒಳ್ಳೆಯದು
* ನಿಮ್ಮ ರೀಡಿಂಗ್ ಎರಡರಿಂದ ಮೂರು ಬಾರಿ ಮಾಡಿ, ಅವುಗಳಲ್ಲಿ ಎರಡು ಸ್ವಲ್ಪ ಒಂದೇ ರೀತಿ ಬಂದರೆ ಅದನ್ನು ಪರಿಗಣಿಸಿ.
ಈ ಅಂಶಗಳನ್ನು ಗಮನಿಸಿ
* ನೀವು ಊಟವಾದ ತಕ್ಷಣ ಅಂದರೆ ಆಹಾರ ಸೇವಿಸಿದ ಒಂದು ಗಂಟೆಯ ಒಳಗಾಗಿ, ಕಾಫಿ ಸೇವಿಸಿದ ಅರ್ಧ ಗಂಟೆಯ ಒಳಗಾಗಿ ಬಿಪಿ ಪರೀಕ್ಷೆ ಮಾಡಬೇಡಿ. ಅದೇ ರೀತಿ ವ್ಯಾಯಾಮ ಮಾಡಿದ ಬಳಿಕ ಒಂದು ಗಂಟೆಯ ಒಳಗಾಗಿ ಬಿಪಿ ಪರೀಕ್ಷೆ ಮಾಡಬೇಡಿ.
* ಬಿಪಿ ಪರೀಕ್ಷೆ ಮಾಡುವಾಗ ನೀವು ಸಡಿಲವಾದ ಪರೀಕ್ಷೆ ಮಾಡಿಸಿ
* ಬಿಸಿ ಪರೀಕ್ಷೆ ಮಾಡುವ 5-10 ನಿಮಿಷ ಮೊದಲು ರೆಸ್ಟ್ ಮಾಡಿ
* ಬಿಸಿ ಪರೀಕ್ಷೆ ಮಾಡುವಾಗ ನಿಮ್ಮ ಕೈಗಳು ಟೇಬಲ್ ಮೇಲೆ ಆರಾಮವಾಗಿರಲಿ
* ನೀವು ಕೂಡ ವಿಶ್ರಾಂತಿಯ ಭಂಗಿಯಲ್ಲಿ ಕುಳಿತಿರಬೇಕು.
ಹೋಂ ಮಾನಿಟರ್‌ನಲ್ಲಿ ಈ ಅಂಶ ಗಮನಿಸಿ
* ನಿಮ್ಮ ಮಾನಿಟರ್‌ನಲ್ಲಿ ನೀಡಲಾದ ಸೂಚನೆಯನ್ನು ಸರಿಯಾಗಿ ಗಮನಿಸಿ
* ಪ್ರತಿಯೊಂದು ಕೈಯಲ್ಲಿ ಎರಡೂ ಬಾರಿ ರೀಡಿಂಗ್ ತೆಗೆದುಕೊಳ್ಳಿ, ಒಂದು ಬಾರಿ ರೀಡಿಂಗ್ ತೆಗೆದ ಬಳಿಕ ಒಂದು ನಿಮಿಷ ಗ್ಯಾಪ್ ಕೊಟ್ಟು ಮತ್ತೊಮ್ಮೆ ರೀಡಿಂಗ್ ಮಾಡಿ.
* ನಿಮ್ಮ ರೀಡಿಂಗ್ ಅಳತೆಯನ್ನು ಒಂದು ಪೇಪರ್ ಅಥವಾ ಬುಕ್‌ನಲ್ಲಿ ಬರೆದಿಡಿ
* ನೀವು ಬಿಪಿ ಚೆಕ್ ಮಾಡುವಾಗ ಎರಡೂ ಕೈಗಳನ್ನು ಪರೀಕ್ಷೆ ಮಾಡಬೇಕು
* ಪ್ರತಿಬಾರಿ ಒಂದೇ ಸಮಯದಲ್ಲಿ ಮಾಡಿ
* ಅದರ ಡಿಸ್‌ಪ್ಲೇ ಸರಿಯಾಗಿ ಇಟ್ಟು ಮಾಡಿ
* ಒಂದು ವೇಳೆ ಅಧಿಕ ರೀಡಿಂಗ್ ತೋರಿಸಿದರೆ ಗಾಬರಿಯಾಗಬೇಡಿ
* ಚಿಕ್ಕ ಬದಲಾವಣೆಗೆ ತಲೆಕೆಡಿಸಿಕೊಳ್ಳಬೇಡಿ
* ರಕ್ತದೊತ್ತಡ ನಿಯಂತ್ರಣಕ್ಕೆ ಬಂದಾಗ ಔಷಧ ತೆಗೆದುಕೊಳ್ಳದೆ ಇರಬೇಡಿ
* ತುಂಬಾನೇ ಬದಲಾವಣೆ ಕಂಡು ಬರುತ್ತಿದೆ, ನೀವು ಎರಡರಿಂದ ಮೂರು ಬಾರಿ ಪರೀಕ್ಷೆ ಮಾಡಿದಾಗಲೂ ರಕ್ತದೊತ್ತಡ ತುಂಬಾ ಅಧಿಕ ಅಥವಾ ತುಂಬಾ ಕಡಿಮೆಯಾದರೆ ತಕ್ಷಣವೇ ನಿಮ್ಮ ವೈದ್ಯರನ್ನು ಭೇಟಿಯಾಗಿ, ಅವರ ಅಪಾಯಿಂಟ್ಮೆಂಟ್ ಸಿಗಲು ತಡವಾದರೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ.





