HEALTH TIPS

ಅವಕಾಶವಾದಿ ರಾಜಕಾರಣ: ಕಾಂಗ್ರೆಸ್‌ ವಿರುದ್ಧ ಎಎಪಿ ವಾಗ್ದಾಳಿ

                 ವದೆಹಲಿ: ದೆಹಲಿಯ ಸೇವಾ ವಿಷಯಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಸುಗ್ರೀವಾಜ್ಞೆಯ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸತತ ಪ್ರಯತ್ನ ನಡೆಸುತ್ತಿದ್ದಾರೆ.

                  ಆದರೆ, ಕಾಂಗ್ರೆಸ್‌ ಮಾತ್ರ ಈ ಬಗ್ಗೆ ಇದುವರೆಗೂ ತನ್ನ ತೀರ್ಮಾನ ಪ್ರಕಟಿಸಿಲ್ಲ. ಹೀಗಾಗಿ, ದೆಹಲಿ ಕಾಂಗ್ರೆಸ್‌ ಘಟಕವು 'ಅವಕಾಶವಾದಿ ರಾಜಕಾರಣ' ಮಾಡುತ್ತಿದೆ ಎಂದು ಆಮ್‌ ಆದ್ಮಿ ಪಕ್ಷವು ಗುರುವಾರ ದೂರಿದೆ.

               ಮತ್ತೊಂದೆಡೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಮುಂಬೈನಲ್ಲಿ ಭೇಟಿಯಾದರು. ನಂತರ ಮಾತನಾಡಿದ ಕೇಜ್ರಿವಾಲ್‌, 'ಬಿಜೆಪಿಯೇತರ ಪಕ್ಷಗಳು ಒಂದಾದರೆ, ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಣಿಸಬಹುದು. ಈ ಸುಗ್ರೀವಾಜ್ಞೆಯು ದೇಶದ ಒಕ್ಕೂಟ ವ್ಯವಸ್ಥೆಗೆ ಪೆಟ್ಟು ನೀಡಲಿದೆ' ಎಂದರು.

                 'ಮುಂಬೈ ಪ್ರವಾಸ ಮುಗಿದ ಮಾರನೇ ದಿನವೇ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗುತ್ತೇನೆ' ಎಂದೂ ಹೇಳಿದರು.

ಶರದ್‌ ಪವಾರ್‌ ಮಾತನಾಡಿ, 'ದೇಶದಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಇದು ದೆಹಲಿಗೆ ಮಾತ್ರ ಸಂಬಂಧಿಸಿದ ವಿಚಾರವಲ್ಲ. ಕೇಜ್ರಿವಾಲ್‌ ಅವರನ್ನು ಎನ್‌ಸಿಪಿ ಬೆಂಬಲಿಸಲಿದೆ. ಕೇಜ್ರಿವಾಲ್‌ ಅವರನ್ನು ಬೆಂಬಲಿಸುವಂತೆ ಇತರ ನಾಯಕರೊಂದಿಗೂ ಮಾತುಕತೆ ನಡೆಸುತ್ತೇವೆ' ಎಂದರು.

ದೆಹಲಿ ಕಾಂಗ್ರೆಸ್‌ ಘಟಕದ ವಿರದ್ಧ ವಾಗ್ದಾಳಿ ನಡೆಸಿರುವ ಆಮ್‌ ಆದ್ಮಿ ಪಕ್ಷವು ಮಾಧ್ಯಮಗೋಷ್ಠಿ ನಡೆಸಿದೆ.

               ಪಕ್ಷದ ಮುಖಂಡ ಸೌರಭ್‌ ಭಾರಧ್ವಾಜ್‌ ಮಾತನಾಡಿ, 'ರಾಷ್ಟ್ರ ರಾಜಧಾನಿ ಪ್ರದೇಶ- ದೆಹಲಿಯ ಸರ್ಕಾರಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ. ದೆಹಲಿಯ‌ಲ್ಲಿ ಒಂದು ಸರ್ಕಾರ ಮಾತ್ರ ಇರಲು ಸಾಧ್ಯ ಎಂದಿದ್ದ ಅಂದಿನ ಕೇಂದ್ರ ಸರ್ಕಾರದ ಆದೇಶವನ್ನು ವಿರೋಧಿಸಿ ಅವರದೇ (ಕಾಂಗ್ರೆಸ್‌) ಪಕ್ಷದ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು 2002ರಲ್ಲಿ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದರು' ಎಂದರು. 'ಒಕ್ಕೂಟ ವ್ಯವಸ್ಥೆ ಸಿದ್ಧಾಂತ ದೆಹಲಿಗೆ ಅನ್ವಯಿಸದು'

                  ಆಮ್‌ ಆದ್ಮಿ ಪಕ್ಷದ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಅಜಯ್‌ ಮಾಕನ್‌, 'ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವ ಕುರಿತು ಅಥವಾ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತ ಬೇಡಿಕೆಯನ್ನು ಶೀಲಾ ದೀಕ್ಷಿತ್‌ ಅವರು ಎಂದಿಗೂ ಕೇಳಿಲ್ಲ. ಈ ಹಿಂದೆ ದೆಹಲಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಾರಿಗೂ ಸಿಗದ ವಿಶೇಷ ಸವಲತ್ತು ತಮಗೆ ಸಿಗಬೇಕು ಎಂದು ಕೇಜ್ರಿವಾಲ್‌ ಅವರು ಬಯಸುತ್ತಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

                     'ಸಂವಿಧಾನದಲ್ಲಿ ದೆಹಲಿಯನ್ನು ದೆಹಲಿ ಎಂದು ಮಾತ್ರ ಹೇಳಿಲ್ಲ. ಅದು ರಾಷ್ಟ್ರದ ರಾಜಧಾನಿ. ಆದ್ದರಿಂದ ದೆಹಲಿಗೆ ಒಕ್ಕೂಟ ವ್ಯವಸ್ಥೆ ಸಿದ್ಧಾಂತವು ಅನ್ವಯಿಸುವುದಿಲ್ಲ. ಆಮ್‌ ಆದ್ಮಿ ಪಕ್ಷದ ಬೆಂಬಲಿಗರು ಈ 'ರಾಷ್ಟ್ರ ರಾಜಧಾನಿ ಪ್ರದೇಶ'ದ ಸತ್ವವನ್ನು ಅರಿತುಕೊಂಡು, ತಮ್ಮ ಬೇಡಿಕೆಯನ್ನು ಹಿಂಪಡೆಯಬೇಕು' ಎಂದರು.

                                   ಮನವಿ:

      ಸನ್ಮನಸ್ಸಿನ ಓದುವರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ. 

    ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:

      ಗೂಗಲ್ ಪೇ: 7907952070

   ಬ್ಯಾಂಕ್ ವಿವರ: 

    ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.

CANARA BANK
BADIYADKA BRANCH
A/c NUMBER: 0611101029775
IFSC: CNRB0004489

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries