HEALTH TIPS

ಭಯೋತ್ಪಾದಕ ಚಟುವಟಿಕೆಗೆ ಹಣ ನೀಡಿದ ಆರೋಪ: ಎರಡು ಕಡೆ ಎನ್‌ಐಎ ಶೋಧ

                ವದೆಹಲಿ: ನಿಷೇಧಿತ ಜಮಾತ್‌-ಉಲ್‌- ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಭಾಗಿಯಾಗಿದ್ದ ಭೋಪಾಲ್‌ ಭಯೋತ್ಪಾದಕ ಕೃತ್ಯಕ್ಕೆ ಹಣ ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಎರಡು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಗುರುವಾರ ಶೋಧ ಕಾರ್ಯಾಚರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.

               ಈ ಪ್ರಕರಣದಲ್ಲಿ ಈಗಾಗಲೇ 10 ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಭೋಪಾಲ್‌ನ ಎನ್‌ಐಎ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕುವ ನಿಟ್ಟಿನಲ್ಲಿ ಈ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಶಂಕಿತರಿಗೆ ಸೇರಿದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಹಲವಾರು ಮೊಬೈಲ್‌ ಫೋನ್‌ಗಳು, ಸಿಮ್‌ ಕಾರ್ಡ್‌ಗಳು, ಬ್ಯಾಂಕ್‌ ಪಾಸ್‌ಪುಸ್ತಕಗಳು ಮತ್ತು ಗುರುತಿನ ಚೀಟಿಗಳು ಸೇರಿ ಹಲವು ಡಿಜಿಟಲ್‌ ಉಪಕರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

                     ಆರೋಪಿಗಳು ವರ್ಗಾಯಿಸಿದ್ದಾರೆ ಎನ್ನಲಾದ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

                  ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಹಿಂಸಾತ್ಮಕ ಜಿಹಾದ್‌ ಪ್ರಯೋಗಿಸುವ ನಿಟ್ಟಿನಲ್ಲಿ ಭಾರತದ ಮುಸ್ಲಿಂ ಯುವಕರನ್ನು ತರಬೇತುಗೊಳಿಸುತ್ತಿದ್ದ ಆರೋಪವು ಬಂಧಿತ 10 ಮಂದಿ ಮೇಲಿದೆ.

ಜೆಎಂಬಿಗೆ ಸೇರಿದ ಆರು ಮಂದಿಯನ್ನು ಭೋಪಾಲ್‌ನ ಮನೆಯೊಂದರಲ್ಲಿ ಬಂಧಿಸಿದ್ದ ಮಧ್ಯಪ್ರದೇಶ ಪೊಲೀಸರು 2022ರ ಮಾರ್ಚ್‌ 14ರಂದು ಎಫ್‌ಐಆರ್‌ ದಾಖಲಿಸಿದ್ದರು. ಬಳಿಕ 2022ರ ಏಪ್ರಿಲ್‌ 5ರಂದು ಎನ್‌ಐಎ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

                            ಮನವಿ:

      ಸನ್ಮನಸ್ಸಿನ ಓದುವರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ. 

    ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:

      ಗೂಗಲ್ ಪೇ: 7907952070

   ಬ್ಯಾಂಕ್ ವಿವರ: 

    ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.

CANARA BANK
BADIYADKA BRANCH
A/c NUMBER: 0611101029775
IFSC: CNRB0004489

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries