ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವನ್ನು 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದು, 2 ಪಕ್ಷಗಳು ಕೇಂದ್ರ ಸರ್ಕಾರ ಆಹ್ವಾನವನ್ನು ಸ್ವೀಕರಿಸಿದೆ. ಆಂಧ್ರಪ್ರದೇಶದ ಆಡಳಿತರೂಢ ವೈಎಸ್‌ಆರ್‌ಸಿಪಿ ಹಾಗೂ ಒಡಿಶಾದ ಆಡಳಿತ ಪಕ್ಷ ಬಿಜು ಜನತಾದಳ ಭಾಗವಹಿಸುವುದಾಗಿ ಹೇಳಿದೆ.
0
samarasasudhi
ಮೇ 25, 2023
ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವನ್ನು 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದು, 2 ಪಕ್ಷಗಳು ಕೇಂದ್ರ ಸರ್ಕಾರ ಆಹ್ವಾನವನ್ನು ಸ್ವೀಕರಿಸಿದೆ. ಆಂಧ್ರಪ್ರದೇಶದ ಆಡಳಿತರೂಢ ವೈಎಸ್‌ಆರ್‌ಸಿಪಿ ಹಾಗೂ ಒಡಿಶಾದ ಆಡಳಿತ ಪಕ್ಷ ಬಿಜು ಜನತಾದಳ ಭಾಗವಹಿಸುವುದಾಗಿ ಹೇಳಿದೆ.
ಈ ಬಗ್ಗೆ ಪತ್ರ ಬಿಡುಗಡೆ ಮಾಡಿರುವ ಬಿಜೆಡಿ ವಕ್ತಾರ ಲೆನಿನ್ ಮೋಹಂತಿ, ' ಸಂಸತ್ ಭವನವು ಪ್ರಜಾತಂತ್ರದ ಸಂಕೇತವಾಗಿದ್ದು, ಎಲ್ಲಾ ರಾಜಕೀಯಕ್ಕಿಂತ ಹೆಚ್ಚಿನದಾಗಿದೆ. ಮತ್ತು ಅದರ ಅಧಿಕಾರ ಮತ್ತು ಸ್ಥಾನಮಾನವನ್ನು ಯಾವಾಗಲೂ ರಕ್ಷಿಸಬೇಕು' ಎಂದು ಅವರು ಹೇಳಿದ್ದಾರೆ.
'ರಾಷ್ಟ್ರಪತಿಗಳು ರಾಜ್ಯಗಳ ಮುಖ್ಯಸ್ಥರಾಗಿದ್ದಾರೆ. ಸಂಸತ್ತು ಭಾರತದ 1.4 ಶತಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಎರಡೂ ಸಂಸ್ಥೆಗಳು ಭಾರತೀಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆ. ಭಾರತದ ಸಂವಿಧಾನದಿಂದ ತಮ್ಮ ಅಧಿಕಾರವನ್ನು ಪಡೆದುಕೊಳ್ಳುತ್ತವೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ವೈಎಸ್‌ಆರ್‌ಸಿಪಿ ಖಚಿತ ಪಡಿಸಿದೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಡಿಯು, ಎಎಪಿ, ಸಿಪಿಎಂ, ಸಿಪಿಐ, ಎಸ್‌ಪಿ, ಎನ್‌ಸಿಪಿ, ಶಿವಸೇನಾ(ಯುಬಿಟಿ), ಆರ್‌ಜೆಡಿ, ಐಯುಎಂಎಲ್, ಜೆಎಂಎಂ, ಎನ್‌ಸಿ, ಕೆಸಿ(ಎಂ), ಆರ್‌ಎಸ್‌ಪಿ, ವಿಸಿಕೆ, ಎಂಡಿಎಂಕೆ, ಆರ್‌ಎಲ್‌ಡಿ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿವೆ.
ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು ಎನ್ನುವುದು ಈ ಪಕ್ಷಗಳ ವಾದ.