HEALTH TIPS

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಗೆ ಉತ್ತಮ ಪರಿಗಣನೆ ನೀಡಲಾಗುತ್ತಿದೆ: ಸಚಿವ ಆರ್.ಬಿಂದು : ಕುಂಬಳೆ ಐಎಚ್‍ಆರ್‍ಡಿ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್‍ನ ನೆಲಮಹಡಿ ಉದ್ಘಾಟನೆ

               ಕುಂಬಳೆ: ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ವಿಷಯದಲ್ಲಿ ಕಾಸರಗೋಡು ಜಿಲ್ಲೆಗೆ ಉತ್ತಮ ಮನ್ನಣೆ ನೀಡುತ್ತಿದೆ ಎಂದು ಉನ್ನತ ಶಿಕ್ಷಣ-ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಆರ್.ಬಿಂದು ತಿಳಿಸಿದರು.

              ಕುಂಬಳೆ ಐಎಚ್‍ಆರ್‍ಡಿ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್‍ನ ಅಡ್ಮಿನಿಸ್ಟ್ರೇಟಿವ್ ಬ್ಲಾಕ್‍ನ ನೆಲಮಹಡಿಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

         ಐ.ಎಚ್.ಆರ್.ಡಿ ಶಿಕ್ಷಣ ಸಂಸ್ಥೆಗಳು ಉನ್ನತ ಶಿಕ್ಷಣ ಕ್ಷೇತ್ರದ ಹೆಮ್ಮೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಸರಗೋಡು ಜಿಲ್ಲೆಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ಐ.ಎಚ್.ಆರ್.ಡಿ ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಒಟ್ಟು 87 ಸಂಸ್ಥೆಗಳು ಐ.ಎಚ್.ಆರ್.ಡಿ ಅಡಿಯಲ್ಲಿವೆ. 1.60 ಕೋಟಿ ವೆಚ್ಚದಲ್ಲಿ ನೆಲ ಅಂತಸ್ತು ನಿರ್ಮಿಸಲಾಗಿದೆ. ಮೊದಲ ಮಹಡಿಗೆ 1.37 ಕೋಟಿ ಮಂಜೂರಾಗಿದೆ. ಇದರ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ವಿದ್ಯಾರ್ಥಿಗಳನ್ನು ಹೊಸ ಜ್ಞಾನ ಸಮಾಜವನ್ನಾಗಿ ಮಾಡಲು ರಾಜ್ಯ ಸರ್ಕಾರ ಅತ್ಯುತ್ತಮ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ಸಮಾಜದ ಎಲ್ಲ ವರ್ಗಗಳನ್ನು ಮುಖ್ಯವಾಹಿನಿಗೆ ತರಲಾಗುವುದು. ಶಿಕ್ಷಣದ ವಿಚಾರದಲ್ಲಿ ಕಾಸರಗೋಡಿಗೆ ಸರ್ಕಾರ ಸದಾ ವಿಶೇಷ ಪರಿಗಣನೆ ನೀಡುತ್ತಾ ಬಂದಿದೆ. 

          ಸಚಿವ ಆರ್.ಬಿಂದು ಮಾತನಾಡಿ, ಈ ಹಿಂದೆ ಕಾನೂನು ಅಧ್ಯಯನಕ್ಕಾಗಿ ಬೇರೆ ರಾಜ್ಯಗಳನ್ನು ಅವಲಂಬಿಸಿದ್ದ ವಿದ್ಯಾರ್ಥಿಗಳು ಈಗ ಮಂಜೇಶ್ವರ ಕಾನೂನು ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. 


         ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕ ಸಿ.ಎಚ್.ಕುಂಞಂಬು ಮುಖ್ಯ ಅತಿಥಿಗಳಾಗಿದ್ದರು.

             ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಪ್ರೇಮಾ ಶೆಟ್ಟಿ, ಕುಂಬಳೆ ಗ್ರಾಮ ಪಂಚಾಯತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷತ್ ನಸೀಮಾ, ಗ್ರಾ.ಪಂ. ಸದಸ್ಯರಾದ ಎಸ್.ಅನಿಲ್ ಕುಮಾರ್, ಎಂ.ಪ್ರೇಮಾವತಿ, ಅಜಯ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಘುದೇವನ್ ಮಾಸ್ತರ್, ತಾ.ಪಂ ಉಪಾಧ್ಯಕ್ಷ ಕೆ.ವಿನಯ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ವಿ.ರಮೇಶ, ರವಿ ಪೂಜಾರಿ, ಮುರಳೀಧರ ಯಾದವ್, ಎ.ಕೆ.ಆರಿಫ್, ಜಯಪ್ರಕಾಶ್ ಶೆಟ್ಟಿ, ಸತೀಶ್. ಶೆಟ್ಟಿ, ತಾಜುದ್ದೀನ್ ಮೊಗ್ರಾಲ್, ಅಹ್ಮದ್ ಅಲಿ, ಮುಹಮ್ಮದ್ ಆನೆಬಾಗಿಲು, ಕಾಲೇಜು ಒಕ್ಕೂಟದ ಅಧ್ಯಕ್ಷೆ ಪಿ.ಸಿತಾರ ಮೊದಲಾದವರು ಮಾತನಾಡಿದರು. ಲೋಕೋಪಯೋಗಿ ಕಟ್ಟಡ ಇಲಾಖೆ ಮಾಜಿ ಎಂಜಿನಿಯರ್ ಮಹಮ್ಮದ್ ಮುನೀರ್ ಯೋಜನಾ ವರದಿ ಮಂಡಿಸಿದರು. ಐಎಚ್ ಆರ್ ಡಿ ನಿರ್ದೇಶಕ ಡಾ.ಪಿ.ಸುರೇಶ್ ಕುಮಾರ್ ಸ್ವಾಗತಿಸಿ, ಪ್ರಾಂಶುಪಾಲೆ ಕೆ.ವಿ.ನಳಿನಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries