HEALTH TIPS

ತಾಳಮದ್ದಳೆ: ಇತಿಹಾಸ ಅಧ್ಯಯನ-ಮಾಹಿತಿ ಸಂಗ್ರಹ:ವಿವರಗಳಿಗೆ ಮನವಿ

               ಮುಳ್ಳೇರಿಯ: ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಪರವಾಗಿ “ತಾಳಮದ್ದಳೆ - ಒಂದು ಐತಿಹಾಸಿಕ ಅಧ್ಯಯನ” ಎಂಬ ಕೃತಿಯನ್ನು ಪ್ರಕಟಿಸಬೇಕೆಂದು ನಿರ್ದರಿಸಲಾಗಿದ್ದು ಈಗಾಗಲೇ ಮಾಹಿತಿಗಳ ಸಂಗ್ರಹ ಭರದಿಂದ ಮುನ್ನಡೆಯುತ್ತಿದೆ. ಈ ಕೃತಿಯಲ್ಲಿ ತಾಳಮದ್ದಳೆಯ ಮೂಲ ಮತ್ತು ಕಾಲದ ಕುರಿತಾದ ಅಧ್ಯಯನದೊಂದಿಗೆ ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಗುರುತಿಸಿ ಆಯಾಯ ಹಂತಗಳಲ್ಲಿ ಮಹತ್ವದ ತಿರುವುಗಳಿಗೆ ಕಾರಣರಾದ ಕಲಾವಿದರ, ಕಲಾಸಕ್ತರ ಮತ್ತು ಸಂಸ್ಥೆಗಳ ಕೊಡುಗೆಗಳನ್ನು ಉಲ್ಲೇಖಿಸಬೇಕಾಗಿದೆ.

         ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದವರು ಕಲೆ ಸಂಸ್ಕೃತಿ ಮತ್ತು ಸಂಶೋಧನೆಗಳ ಕುರಿತು ಆಸಕ್ತಿಯಿರುವವರು ತಮ್ಮ ಬಳಿ ಇರುವ  ಮಾಹಿತಿಗಳನ್ನು ಅಂಚೆ ಮೂಲಕ ಅಥವಾ ದೂರವಾಣಿ ಮೂಲಕ ಅಥವಾ ಇನ್ನಿತರ ಸಂಪರ್ಕ ಸಾಧನಗಳ ಮೂಲಕ ಒದಗಿಸಿಕೊಡಬೇಕಾಗಿ ವಿನಂತಿಸಲಾಗಿದೆ. ಈ ಬಗೆಯ ಮಾಹಿತಿಗಳು ಲಭ್ಯವಿರುವ ಆಕರಗಳನ್ನು ತಿಳಿಸಿ ಸಹಕರಿಸಬೇಕಾಗಿಯೂ ವಿನಂತಿಸಲಾಗಿದೆ ಸಹಕಾರ ನೀಡಿದವರ ಹೆಸರುಗಳನ್ನು ಕೃತಿಯಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗುವುದು ಮಾಹಿತಿಗಳನ್ನು ಡಾ. ರಮಾನಂದ ಬನಾರಿ ಮಂಜೇಶ್ವರ, ಗಣರಾಜ ಕುಂಬ್ಳೆ ರಾಮಕುಂಜ, ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಅಂಚೆ: ಪಂಜಿಕಲ್ಲು 671543 ಅಥವಾ ಡಾ.ರಮಾನಂದ ಬನಾರಿ 9846673422, ವಾಟ್ಸಪ್ 9446297226, ಗಣರಾಜ ಕುಂಬ್ಳೆ 7760421005, ಶ್ವೇತಾ ರಮೇಶ್ 9449370583 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಇ.ಮೇಲ್. 

banariyakshaganakalakendra@gmail.com

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries