ಬದಿಯಡ್ಕ: ಬದುಕಿನ ಸಮಗ್ರ ಉನ್ನತಿಗೆ ಸಾಹಿತ್ಯದ ಬೆಂಬಲ ಶಕ್ತಿ ನೀಡುತ್ತದೆ. ಸಮಾಜದ ಸಮಗ್ರ ಏಳ್ಗೆಗೆ ವ್ಯಾಪಕ ಶಕ್ತಿ ತುಂಬುವ ಕಲೆ-ಸಾಹಿತ್ಯ ಪ್ರಕಾರಗಳಿಗೆ ಯುವ ಸಮೂಹವನ್ನು ಸೆಳೆದು ತರುವ ನಿರಂತರ ಯತ್ನ ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯ ಮೊದಲ ಆದ್ಯತೆಯಾಗಬೇಕು ಎಂದು ಖ್ಯಾತ ವ್ಯಂಗ್ಯಚಿತ್ರ ಕಲಾವಿದ, ಸಾಹಿತಿ ವೆಂಕಟ್ ಭಟ್ ಎಡನೀರು ಕರೆನೀಡಿದರು.
ಕೊಲ್ಲಂಗಾನದ ಅನಂತಶ್ರೀಯ 6ನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಅಪರಾಹ್ನ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಸರಗೋಡು ಬಹುಭಾಷಾ ನೆಲವಾಗಿ ಬಹುಸಂಸ್ಕøತಿ, ಸಂವಹನಗಳನ್ನು ವಿಶಾಲವಾಗಿ ಬೆಳೆಯಲು ಕಾರಣವಾದ ಶ್ರೀಮಂತ ಪ್ರತೀಕವಾಗಿದೆ. ಅಕ್ಷರಗಳ ಮೂಲಕ ವಸ್ತು, ವಿಷಯಗಳನ್ನು ಗೇಯತೆಯಲ್ಲಿ ಪೋಣೀಸುವ, ಅರ್ಥ ವಿಸ್ತಾರತೆಯನ್ನು ಕಿರಿದಾಗಿ ಪ್ರಸ್ತುತಪಡಿಸುವ ಕಲೆಗಾರಿಕೆ ಬರಹಗಾರನಿಗೆ ಸಿದ್ದಿಸಿದಾಗ ಅತ್ಯುತ್ತಮ ಕಾವ್ಯ ಹುಟ್ಟಿಕೊಳ್ಳುತ್ತದೆ. ವಿಶಾಲತೆಯಿಂದ ಪ್ರಪಂಚವನ್ನು ನೋಡುವ ಮನೋಸ್ಥಿತಿ, ತೆರೆದ ಹೃದಯದೊಂದಿಗೆ ಎಲ್ಲವನ್ನು ಸ್ವೀಕರಿಸುವ ವಿಶಾಲತೆ ಕವಿಯನ್ನು ರೂಪಿಸುತ್ತದೆ ಎಂದವರು ತಿಳಿಸಿದರು.
ಕವಿಗಳಾದ ಬಾಲ ಮಧುರಕಾನನ, ಪರಮೇಶ್ವರ ನಾಯ್ಕ್ ಅರ್ತಲೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮಲಾರು ಜಯರಾಮ ರೈ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಶಂಕರ ಸ್ವಾಮಿಕೃಪಾ, ನ್ಯಾಯವಾದಿ ಥೋಮಸ್ ಡಿ.ಸೋಜ, ಪ್ರೇಮಚಂದ್ರನ್ ಚೊಂಬಾಲ, ರಾಘವನ್ ಬೆಳ್ಳಿಪ್ಪಾಡಿ, ದಯಾನಂದ ರೈ ಕಳುವಾಜೆ, ಸುಂದರ ಬಾರಡ್ಕ, ರೇಖಾ ಶ್ರೀನಿವಾಸ್ ಮುನಿಯೂರು, ಎ.ಪ್ರಸನ್ನಕುಮಾರಿ ಮರ್ದಂಬೈಲು, ವನಜಾಕ್ಷಿ ಚೆಂಬ್ರಕಾನ, ಸ್ನೇಹಲತಾ ದಿವಾಕರ್, ಚಂದ್ರಕಲಾ ಗೋಪಾಲ ವಿವಿಧ ಭಾಷೆಗಳ ಸ್ವರಚಿತ ಕವನಗಳನ್ನು ವಾಚಿಸಿದರು.
ಅಖಿಲೇಶ್ ನಗುಮುಗಂ ಸ್ವಾಗತಿಸಿ, ಸಾಯಿಭದ್ರಾ ರೈ ವಂದಿಸಿದರು. ರವಿ.ನಾಯ್ಕಾಪು ನಿರೂಪಿಸಿದರು. ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದರು.

.jpg)
