HEALTH TIPS

ಉರಿಯೂತ, ಅಲರ್ಜಿ ಮುಂತಾದ ಸಮಸ್ಯೆಗೆ ಎಕ್ಕೆ ಗಿಡದ ಮನೆಮದ್ದು: ಇದನ್ನು ಬಳಸುವುದು ಹೇಗೆ ಗೊತ್ತೇ?

 ನಮ್ಮ ಸುತ್ತಮುತ್ತ ಸಿಗುವ ಸಾಕಷ್ಟು ಗಿಡಗಳಲ್ಲಿ, ಬಳ್ಳಿ ಹೂವು ಹಣ್ಣು, ಕಾಯಿಗಳಲ್ಲಿ ಔಷಧಿಯ ಗುಣಗಳು ಸಾಕಷ್ಟಿರುತ್ತದೆ. ಆಯುರ್ವೇದಿಕದಲ್ಲಿ ಬಳಸಲಾಗುವ ಕೆಲವು ಗಿಡಮೂಲಿಕೆಗಳನ್ನು ನಾವು ಸ್ವತಃ ಬಳಸಿ ಆರೋಗ್ಯಕರ ಪ್ರಯೋಜನಗಳನ್ನು ಕಂಡುಕೊಳ್ಳಬಹುದು ಹಾಗೆ ಜನರಿಗೆ ಸುಲಭವಾಗಿ ಸಿಗಬಲ್ಲ ಹಾಗೂ ಔಷಧೀಯ ಸಸ್ಯವಾಗಿರುವ ಅತ್ಯಮೂಲ್ಯ ಸಸ್ಯದ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.

ಆಯುರ್ವೇದಿಕದಲ್ಲಿ ಹಾಗೂ ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಎಕ್ಕದ ಗಿಡ ಜನಪ್ರಿಯ ಔಷಧಿ ಸಸ್ಯ ಎನಿಸಿಕೊಂಡಿದೆ. ಹೂವು ಗಿಡ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದರೂ ಕೂಡ ಅದನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಯನ್ನು ವಹಿಸಬೇಕು ಇಲ್ಲವಾದರೆ ಆರೋಗ್ಯದ ಬದಲು ಅನಾರೋಗ್ಯದ ಸಮಸ್ಯೆ ಉಂಟಾಗಬಹುದು.

ಈ ಮುನ್ನೆಚ್ಚರಿಕೆ ವಹಿಸಿ:
ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದರು ಕೂಡ ಅದನ್ನು ಬಳಸುವಾಗ ಕೆಲವು ಮುನ್ನಚ್ಚರಿಕೆ ವಹಿಸಬೇಕು. ಸರಿಯಾದ ಪರಿಣಿತಿ ಇಲ್ಲದೆ ಇದನ್ನು ಬಳಸಿದರೆ ಸಮಸ್ಯೆಗಳು ಉಂಟಾಗಬಹುದು.

ತಜ್ಞರ ಸಲಹೆ:
ಎಕ್ಕದ ಗಿಡವನ್ನು ಔಷಧವಾಗಿ ಬಳಸುವುದಕ್ಕೂ ಮುನ್ನ ಆರೋಗ್ಯ ತಜ್ಞರ ಬಳಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಎಕ್ಕದ ರಸ ಅಥವಾ ಎಕ್ಕದ ಔಷಧವನ್ನು ಹೇಗೆ ತೆಗೆದುಕೊಳ್ಳಬೇಕು ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವೈದ್ಯರನ್ನ ಕೇಳಿ ತಿಳಿದುಕೊಳ್ಳಬೇಕು ಇಲ್ಲವಾದರೆ ಅಡ್ಡ ಪರಿಣಾಮಗಳು ಉಂಟಾಗಬಹುದು.
ಅಲರ್ಜಿ ಬಗ್ಗೆ ಗಮನವಿರಲಿ: ಮಿಲ್ಕ್ ವೀಡ್ ಅಥವಾ ಒಲಿಯಾಂಡರ್ ಸಸ್ಯಗಳು ಆಪೋಸಿನೆಸಿಯ ಕುಟುಂಬದ ಸಸ್ಯಗಳಾಗಿವೆ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಪ್ಯಾಚ್ ರೀತಿಯಲ್ಲಿ ಸ್ವಲ್ಪ ಹಚ್ಚಿ ಪರೀಕ್ಷೆ ಮಾಡಿ ನಂತರ ಅದನ್ನು ಬಳಸಬೇಕು ನಿಮ್ಮ ತ್ವಚೆಗೆ ಅದು ಸೂಟ್ ಆಗುತ್ತದೆಯೇ ಎಂಬುದನ್ನು ನೋಡಿಕೊಳ್ಳಬೇಕು.

ಪ್ರಯೋಜನಗಳು:
ಗಿಡ ಅಥವಾ ಅದರ ಔಷಧವನ್ನು ಸರಿಯಾದ ರೀತಿಯಲ್ಲಿ ಬಳಸಲು ನಿಮಗೆ ಗೊತ್ತಿದ್ದರೆ ಅದರಷ್ಟು ಪ್ರಭಾವಿ ಔಷಧಿ ಬೇರೊಂದಿಲ್ಲ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಎಕ್ಕದ ಗಿಡದ ಮಹತ್ವ ಏನು ನೋಡೋಣ.

ಉರಿಯೂತದ ಗುಣಲಕ್ಷಣ:
ಗುಣಲಕ್ಷಣಗಳು ಇರುವುದರಿಂದ ಇದು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಮೊದಲನೇದಾಗಿ ಗೌಟ್(ಕಾಲಿನ ಬೆರಳುಗಳ ತುದಿಯಲ್ಲಿ ಕಾಣಿಸಿಕೊಳ್ಳುವ ನೋವು) ನೋವುಗಳಿಗೆ ಬಹಳ ಉಪಯುಕ್ತವಾದ ಔಷಧಿ ಇದು.
ಎಕ್ಕದ ಗಿಡದಿಂದ ಗಾಯ ಮಾಯ:
ಗಿಡದಲ್ಲಿ ಲಾಟಿಕ್ಸ್ ಎನ್ನುವ ಅಂಶ ಇದ್ದು, ಪುರಾತನ ಕಾಲದಿಂದಲೂ ಇದನ್ನು ಬಳಸಿಕೊಂಡು ಬರಲಾಗುತ್ತಿದೆ. ಗಿಡದ ರಸ ಗಾಯವನ್ನು ತಕ್ಷಣಕ್ಕೆ ಗುಣಪಡಿಸುತ್ತದೆ ಪುನ:ಸ್ಥಾಪಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣದಿಂದಾಗಿ ಸೋಂಕುಗಳನ್ನು ಕೂಡ ತಡೆಗಟ್ಟಬಹುದು.
ಉಸಿರಾಟದ ಸಮಸ್ಯೆಗೆ ರಾಮಬಾಣ:
ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಎಕ್ಕದ ಗಿಡಗಳ ರಸವನ್ನ ಬಳಸಲಾಗುತ್ತದೆ ಅದರಲ್ಲೂ ಅಸ್ತಮಾ,ಬ್ರಾಂಕೈಟಿಸ್, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ.
ಅಲರ್ಜಿ ನಿವಾರಕ; ದೇಹದಲ್ಲಿ ಕಾಣಿಸಿಕೊಳ್ಳುವ ದದ್ದು, ತುರಿಕೆ ಸೋರಿಯಾಸಿಸ್ ಮೊದಲಾದ ಚರ್ಮ ಸಂಬಂಧಿ ಕಾಯಿಲೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ.

ಅಡ್ಡ ಪರಿಣಾಮಗಳು:
ಗಿಡದ ಔಷಧಿ ಬಹಳ ಒಳ್ಳೆಯದು ನಿಜ ಆದರೆ ಇದರ ಬಳಕೆ ಸರಿಯಾಗಿ ಆಗದೆ ಇದ್ದಲ್ಲಿ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗಬಹುದು ಹಾಗಾಗಿ ಇದನ್ನು ಬಳಕೆ ಮಾಡುವುದಕ್ಕೂ ಮೊದಲು ಇರುವ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದ್ರೆ ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಯಾವವು ನೋಡೋಣ.
ಕರುಳಿನ ಸಮಸ್ಯೆ:
ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡದೆ ಇದ್ದರೆ ಇದು ಜೀರ್ಣಾಂಗದ ಸಮಸ್ಯೆಯನ್ನು ಉಂಟು ಮಾಡಬಹುದು ಅತಿಸಾರ, ವಾಕರಿಕೆ ಅಥವಾ ವಾಂತಿ ಮೊದಲಾದ ಸಮಸ್ಯೆಗೆ ಕಾರಣವಾಗಬಹುದು.
ಚರ್ಮದ ತುರಿಕೆ:
ಚರ್ಮದ ಮೇಲೆ ಇರುವ ದದ್ದು ತುರಿಕೆ ಮೊದಲಾದವುಗಳನ್ನು ನಿವಾರಿಸುವ ಶಕ್ತಿ ಹೊಂದಿದೆ ಆದರೆ ಕೆಲವರಿಗೆ ಈ ರಸ ಅವರ ತ್ವಚೆಗೆ ಸರಿ ಹೊಂದದೆ ಇರಬಹುದು ಇಂತಹ ಸಂದರ್ಭದಲ್ಲಿ ತುರಿಕೆ ಹೆಚ್ಚಾಗುವುದು ಊತ ಕಾಣಿಸಿಕೊಳ್ಳುವುದು ಮೊದಲಾದ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಇದನ್ನು ಸಂಪೂರ್ಣ ದೇಹಕ್ಕೆ ಹಚ್ಚುವುದಕ್ಕೂ ಮೊದಲು ದೇಹದ ಸಣ್ಣ ಚರ್ಮದ ಭಾಗಕ್ಕೆ ಹಚ್ಚಿ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ನಂತರ ಬಳಕೆ ಮಾಡಿ.

ಹೃದಯ ಸಂಬಂಧಿತ ಸಮಸ್ಯೆ:
ಎಕ್ಕದ ರಸದಲ್ಲಿ ಎಂಬುದು ಕಂಡು ಬಂದಿದೆ ಇದು ಹೃದಯದ ಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡಿ ಹೃದಯದ ಸಮಸ್ಯೆಗೆ ಕಾರಣವಾಗಬಹುದು ಜೊತೆಗೆ ಅಧಿಕಾರದಂತಹ ಸಮಸ್ಯೆ ಕೂಡ ಎದುರಿಸಬೇಕಾಗಬಹುದು. ಹಾಗಾಗಿ ಈ ಮೇಲಿನ ಎಲ್ಲಾ ಅಡ್ಡ ಪರಿಣಾಮಗಳ ಬಗ್ಗೆ ಗಮನ ವಹಿಸಿ ನಿಮ್ಮ ದೇಹಕ್ಕೆ ಸರಿಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು ಎಕ್ಕದ ಔಷಧವನ್ನು ಬಳಸಿ.

ನೀವು ಸರಿಯಾದ ರೀತಿಯಲ್ಲಿ ಎಕ್ಕದ ಔಷಧವನ್ನು ಬಳಸಿದರೆ ತಜ್ಞರ ಸಹಾಯವನ್ನು ಪಡೆದುಕೊಂಡು ಇದರ ಸರಿಯಾದ ಬಳಕೆ ತಿಳಿದುಕೊಂಡರೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ಔಷಧಿ ಖರೀದಿಸುವುದಕ್ಕಿಂತಲೂ ಈ ಔಷಧದಿಂದಲೇ ಹಲವು ಅನಾರೋಗ್ಯಕರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries