HEALTH TIPS

ಪೊನ್ನಂಬಲಮೇಟ್‍ನಲ್ಲಿ ಅತಿಕ್ರಮಿಸಿ ಪೂಜೆ: ರಹಸ್ಯ ಮಾಹಿತಿ ಮೇರೆಗೆ ಕುಮಳಿ ಮೂಲದ ಮಧ್ಯವರ್ತಿಯ ಬಂಧನ

               ಪತ್ತನಂತಿಟ್ಟ: ಶಬರಿಮಲೆ ಪೊನ್ನಂಬಲಮೇಟ್‍ಗೆ ಅಕ್ರಮ ಪ್ರವೇಶಗೈದು ಪೂಜೆ ಸಲ್ಲಿಸಿದ ಪ್ರಕರಣದಲ್ಲಿ ಕುಮಳಿ ಮೂಲದ ಚಂದ್ರಶೇಖರನ್ (ಕಣ್ಣನ್) ಎಂಬಾತನನ್ನು ಬಂಧಿಸಲಾಗಿದೆ.

                 ಪೂಜೆ ನೆರವೇರಿಸಿದ ನಾರಾಯಣನ್ ನಂಬೂದಿರಿ ಅವರನ್ನು ಅರಣ್ಯ ಇಲಾಖೆ ನೌಕರರಾದ ರಾಜೇಂದ್ರನ್ ಕರುಪ್ಪಯ್ಯ ಮತ್ತು ಸಾಬು ಮ್ಯಾಥ್ಯೂ ಅವರಿಗೆ ಪರಿಚಯಿಸಿದ್ದು ಕಣ್ಣನ್ ಎಂದು ಪೊಲೀಸರು ತಿಳಿಸಿದ್ದಾರೆ. ಕರುಪ್ಪಯ್ಯ ಮತ್ತು ಸಾಬು ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರನ್ನು ವಿಚಾರಣೆಗೊಳಪಡಿಸಿದ ಮೇಲೆ ಕಣ್ಣನ್ ಬಗ್ಗೆ ಮಾಹಿತಿ ಲಭಿಸಿದೆ.

                ಈತ ಕಟ್ಟಪ್ಪನದಲ್ಲಿದ್ದಾನೆ ಎಂಬ ಸುಳಿವಿನ ಮೇರೆಗೆ ಅರಣ್ಯ ಸಿಬ್ಬಂದಿ ಬಂದು ಚಂದ್ರಶೇಖರನನ್ನು ಬಂಧಿಸಿದ್ದಾರೆ. ತ್ರಿಶೂರ್ ತೆಕೆಕ್ಕಾಟ್ ಮಠದ ನಾರಾಯಣನ್ ನಂಬೂದಿರಿ ನೇತೃತ್ವದ ಒಂಬತ್ತು ಸದಸ್ಯರ ಗುಂಪು ಇಲ್ಲಿಗೆ ಪ್ರವೇಶಿಸಿ ಪೂಜೆ ಸಲ್ಲಿಸಿತ್ತು. ಘಟನೆ ವಿವಾದವಾಗುತ್ತಿದ್ದಂತೆ ಪಚ್ಚಕಾನಂ ಅರಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ವಾರಗಳ ಹಿಂದೆ ಈ ಗುಂಪು ಅರಣ್ಯ ಪ್ರವೇಶಿಸಿತ್ತು. ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಾಗ ಬೆಳಕಿಗೆ ಬಂದಿದೆ.

                   ಆರೋಪಿಗಳು ಉದ್ದೇಶಪೂರ್ವಕವಾಗಿ ಶಬರಿಮಲೆ ದೇಗುಲದ ಪವಿತ್ರತೆಯನ್ನು ಹಾಳುಗೆಡವಲು ಯತ್ನಿಸಿದ್ದಾರೆ ಮತ್ತು ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ಹೇಳಲಾಗಿದೆ. ಘಟನೆಯಲ್ಲಿ ಒಂಬತ್ತು ಜನರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು. ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಪ್ರಕರಣ ದಾಖಲಾಗಿದೆ. ತ್ರಿಶೂರ್ ಮೂಲದ ನಾರಾಯಣನ್ ನಂಬೂದಿರಿ ಅವರು ಸಾಕಷ್ಟು ಸಮಯದಿಂದ ಚೆನ್ನೈನಲ್ಲಿ ನೆಲೆಸಿದ್ದಾರೆ.

         ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಅವರು ಆಗಮಿಸಿದ್ದರು. ನಂತರ ಅರಣ್ಯ ಇಲಾಖೆಯ ಕರುಪ್ಪಯ್ಯ ಮತ್ತು ಸಾಬು ಅವರಿಗೆ ಹಣ ಪಾವತಿಸಿ ಒಳಪ್ರವೇಶಿಸಿದರು ಎಂದು ತಿಳಿದುಬಂದಿದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries