ಜಮ್ಮು : 'ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಯಾರೂ ಕಾನೂನಿನಗಿಂತ ಮೇಲಲ್ಲ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಗುರುವಾರ ತಿಳಿಸಿದರು.
0
samarasasudhi
ಜೂನ್ 22, 2023
ಜಮ್ಮು : 'ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಯಾರೂ ಕಾನೂನಿನಗಿಂತ ಮೇಲಲ್ಲ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಗುರುವಾರ ತಿಳಿಸಿದರು.
'ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ವ್ಯಕ್ತಿಯ ಸ್ಥಿತಿಗತಿ ಅಥವಾ ಹಿನ್ನೆಲೆ ಮುಖ್ಯವಾಗುವುದಿಲ್ಲ.
ಕಾನೂನು ಜಾರಿ ಸಂಸ್ಥೆಗಳು ಯಾರನ್ನಾದರೂ ವಿಚಾರಣೆ ಸಲುವಾಗಿ ಸಮನ್ಸ್ ನೀಡಿದರೆ, ಅದನ್ನು ವಿರೋಧಿಸಿ ಪ್ರತಿಭಟಿಸುವುದು ಸೂಕ್ತವಲ್ಲ ಎಂದರು.
ಕಾನೂನಿಗೆ ಹೊರತಾಗಿ ಯಾರೂ ಇಲ್ಲ. ಹಿನ್ನಲೆ ಅಥವಾ ಸ್ಥಿತಿಗತಿ ಏನೇ ಇದ್ದರೂ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂಬ ಸ್ಪಷ್ಟ ಸಂದೇಶ ಕೆಲವು ವರ್ಷಗಳಿಂದ ನೀಡಲಾಗಿದೆ ಎಂದು ತಿಳಿಸಿದರು.