ಕುಂಬಳೆ: ಪುತ್ತಿಗೆ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಂಗವಾಗಿ ಪ್ರಥಮ ಸಭೆ ಕ್ಷೇತ್ರ ಸಭಾಂಗಣದಲ್ಲಿ ಭಾನುವಾರ ಜರಗಿತು.
ಸಾಗರ್ ಕನ್ ಸ್ಟ್ರಕ್ಸನ್ ಮಾಲಕ,ಉದ್ಯಮಿ ಗಿರಿಧರ ಶೆಟ್ಟಿ ಮಂಗಳೂರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಯಾವುದೇ ಕೆಲಸವನ್ನಾದರೂ ದೇವರ ಮೇಲೆ ನಂಬಿಕೆ ಇರಿಸಿ ಮುಂದುವರಿದರೆ ಸಂಕಷ್ಟದ ಸಮಯದಲ್ಲೂ ಯಶಸ್ಸು ಸಾಧ್ಯ. ಕ್ಷೇತ್ರ ಅಭಿವೃದ್ಧಿ ಎಲ್ಲರ ಅಭಿಲಾμÉಯಾಗಿದ್ದರು ದೈವ ಹಿತ ಚಿಂತಿಸಿ ಮುಂದುವರಿದರೆ ಗುರಿ ಮುಟ್ಟಲು ಸಾಧ್ಯ ಎಂದರು.
ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ,ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರ ಸಭೆಯ ಅಧ್ಯಕ್ಷತೆವಹಿಸಿದ್ದರು.ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಅತಿಕಾರಿ ಮಹಾಲಿಂಗೇಶ್ವರಯ್ಯ, ದೇವಸ್ವಂ ಬೋರ್ಡ್ ಸದಸ್ಯ ಎಂ.ಶಂಕರ ರೈ ಮಾಸ್ತರ್, ಸೇವಾ ಸಮಿತಿ ಕಾರ್ಯಧ್ಯಕ್ಷ ಡಿ.ಎನ್.ರಾಧಾಕೃಷ್ಣ , ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಶಿವಪ್ಪ ರೈ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಡಿ.ರಾಜೇಂದ್ರ ರೈ ಸ್ವಾಗತಿಸಿ ಕೇಶವ ಮಾಸ್ತರ್ ವಂದಿಸಿದರು. ಕ್ಷೇತ್ರ ಜೀರ್ಣೋದ್ಧಾರ ಕಾರ್ಯದ ಅಭಿಪ್ರಾಯಗಳನ್ನು ವಿವಿಧ ಜನರು ಮಂಡಿಸಿದರು. ಇದರಂತೆ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ದೈವ ಚಿಂತನೆ ನಡೆಸಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡು ಬ್ರಹ್ಮಕಲಶೋತ್ಸವ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.





