ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ವತಿಯಿಂದ ಜು. 16 ಭಾನುವಾರ ಸಂಘದ ನೂತನ ನಿವೇಶನ ತೂಮಿನಾಡು ಕುಂಜತ್ತೂರುದಲ್ಲಿ ಬೆಳಗ್ಗೆ 10.25 ರ ಸುಮುಹೂರ್ತದಲ್ಲಿ ನೂತನ ಜಿಲ್ಲಾ ಕುಲಾಲ ಸಮಾಜ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿರವರು ಆಶೀರ್ವಚನ ನೀಡಲಿದ್ದು,ಜಿಲ್ಲಾ ಸಂಘದ ಅಧ್ಯಕ್ಷÀ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎ.ಕೆ ಎಂ. ಅಶ್ರಫ್, ಕಮಲಾಕ್ಷಿ ವಿ. ಕುಲಾಲ್, ಜಿಲ್ಲಾ ಪಂಚಾಯತಿ ಸದಸ್ಯರು, ಕುಲಶೇಖರ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುμÉೂೀತ್ತಮ ಕುಲಾಲ್ ಕೆ., ದ. ಕ. ಜಿಲ್ಲಾ ಮೂಲ್ಯರ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮಾಡ ದೈವಕ್ಷೇತ್ರದ ಅಣ್ಣ ದೈವಪಾತ್ರಿ ರಾಜ ಬೆಳ್ಚಪ್ಪಾಡ, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲೇವಿನಾ ಮೊಂತೇರೊ, ಕುಂಜತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕೃಷ್ಣ ಶಿವ ಕುಂಜತ್ತೂರು, ಮೋಹನ್ ಶೆಟ್ಟಿ ತೂಮಿನಾಡು ಹಾಗೂ ಇತರರು ಭಾಗವಹಿಸುವರು. ಭೋಜನ ನಂತರ ಮದ್ಯಾಹ್ನ 2.30 ರಿಂದ ಜಿಲ್ಲಾ ಕುಲಾಲ ಸಂಘದ 39 ನೇ ವಾರ್ಷಿಕ ಮಹಾಸಭೆ ಜಿಲ್ಲಾ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿರವರ ಅಧ್ಯಕ್ಷತೆ ಯಲ್ಲಿ ಜರಗಲಿದೆ.




