HEALTH TIPS

ಬೆಳ್ಳೂರು ಪುರವಾಸ ಭಕ್ತಿಗೀತೆ ಅಲ್ಬಂ ಹಾಡು ಬಿಡುಗಡೆ

               ಮುಳ್ಳೇರಿಯ: ನವ್ಯತಾ ಪ್ರೊಡಕ್ಷನ್ ನೇತೃತ್ವದಲ್ಲಿ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದ ಬಗ್ಗೆ ಸಾಹಿತಿ, ರಂಗ ನಟ ಎ.ಬಿ.ಮಧುಸೂದನ ಬಳ್ಳಾಲ್ ಅಡ್ವಳ ಅವರು ರಚಿಸಿದ "ಬೆಳ್ಳೂರು ಪುರವಾಸ" ಎಂಬ ಭಕ್ತಿಗೀತೆ ಆಲ್ಬಂ ಕ್ಷೇತ್ರದ ಸಭಾಂಗಣದಲ್ಲಿ ಗುರುವಾರ  ಬಿಡುಗಡೆಗೊಂಡಿತು. ಕರ್ನಾಟಕ ಇತಿಹಾಸ ಆಕಾಡೆಮಿ ಗಡಿನಾಡ ಘಟಕದ ಅಧ್ಯಕ್ಷ, ಕೊಡುಗೈ ದಾನಿ, ಸಾಮಾಜಿಕ ಮುಂದಾಳು ಪ್ರಭಾಕರ ಕಲ್ಲೂರಾಯ ಬನದಗದ್ದೆ ಆಲ್ಬಂ ಸಾಂಗ್ ನ್ನು ಬಿಡುಗಡೆಗೊಳಿಸಿ ಮಾತನಾಡಿ, ಬ್ರಹ್ಮಸೂತ್ರಗಳಂತಹ ಕಠಿಣ ಶಾಸ್ರ್ತ ವಿಭಾಗಗಳಲ್ಲಿ ಇರುವ ವಿಚಾರಗಳನ್ನು ನಮ್ಮಂತಹ ಜನ ಸಾಮಾನ್ಯರಿಗೆ ಅರ್ಥೈಸಿಕೊಳ್ಳಲು ಅಸಾಧ್ಯವಾದುದರಿಂದ ದೇವರ ಬಗ್ಗೆ ಇಂದು ಸರಳ ಸಾಹಿತ್ಯದ ಭಕ್ತಿಗೀತೆಗಳಿಂದ  ಭಜಿಸಲು ಹಾಗೂ ಭಾವನೆಯ ಗೂಡಿನಿಂದ ಆರಾಧಿಸಲು ಸಾಧ್ಯ. ಇಂತಹ ಸಾಹಿತ್ಯ ಸಮರ್ಪಣೆಗಳು ಭವಿಷ್ಯದ ಜನಾಂಗಕ್ಕೆ ದೇವತಾ ಭಕ್ತಿ ಹಾಗೂ ಧಾರ್ಮಿಕ ಪ್ರೀತಿ ಹುಟ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರಧೇಶವಾದ ಬೆಳ್ಳೂರು ಕ್ಷೇತ್ರದ ಬಗ್ಗೆಯೂ ಕೂಡಾ ಆಧುನಿಕ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಭಕ್ತಿಗೀತೆಯ ಆಲ್ಬಂ ಹಾಡನ್ನು ಹೊರ ತಂದಿರುವುದು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದರು. 

          ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ಬಲ್ಲಾಳ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪವಿತ್ರಪಾಣಿ ಪುಂಡರೀಕಾಕ್ಷ ಕಡಂಬಳಿತ್ತಾಯ, ಸೇವಾ ಸಮಿತಿ ಗೌರವಾಧ್ಯಕ್ಷ ವೆಂಕಟಕೃಷ್ಣ, ಪ್ರೊ.ಎ.ಶ್ರೀನಾಥ್, ಡಾ.ಮೋಹನದಾಸ ರೈ ಬೆಳ್ಳೂರು,ಸಾಹಿತಿ ಮಧುಸೂದನ ಬಲ್ಲಾಳ್, ಅಲ್ಬಂ ಹಾಡಿನ ಸಂಯೋಜಕ ಗಡಿನಾಡ ಗಾನ ಕೋಗಿಲೆ ವಸಂತ ಬಾರಡ್ಕ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೃಷ್ಣ ಪ್ರಶಸ್ತಿಯನ್ನು ಪ್ರಭಾಕರ ಕಲ್ಲೂರಾಯ ಬನದಗದ್ದೆ ದಂಪತಿಗಳಿಗೆ ಪ್ರದಾನಿಸಲಾಯಿತು. ಬಾಲ ಪ್ರತಿಭೆ ಮಿತುಲ್ ಶರಣ್ ಬೆಳ್ಳೂರು ಹಾಗೂ ಅಲ್ಬಂ ಚಿತ್ರೀಕರಣಕ್ಕೆ ಸಹಕರಿಸಿದ ನಿತಿನ್ ಅಮರ್, ಬಾಲು ಮವ್ವಾರು, ವಸಂತ ಬಾರಡ್ಕ ಅವರನ್ನು ಅಭಿನಂದಿಸಲಾಯಿತು. ವಿ.ಜಿ. ಕಾಸರಗೋಡು ನಿರೂಪಿಸಿದರು. ಅಲ್ಬಂನಲ್ಲಿ ವಸಂತ ಬಾರಡ್ಕ, ಸವಿತಾ ಸಂತೋಷ್ ಬದಿಯಡ್ಕ, ಎಲ್ವಿಶಾ ಉಪ್ಪಳ ಧ್ವನಿ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries