HEALTH TIPS

ರವಿಕಾಂತರ ಕಾಂತೀಯ ಶಕ್ತಿ ಸಮಾಜಕ್ಕೆ ನಷ್ಟ : ನ್ಯಾಯವಾದಿ.ವೆಂಕಟರಮಣ ಭಟ್

            ಬದಿಯಡ್ಕ: ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ, ಸಹಕಾರಿ ರಂಗದಲ್ಲಿ ಸಕ್ರಿಯರಾಗಿದ್ದ ರವಿಕಾಂತ ಕೇಸರಿ ಕಡಾರು ಅವರ ಅನೀರಿಕ್ಷಿತ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟನ್ನೇ ಸೃಷ್ಟಿಸಿದ್ದು ಅವರ ಆದರ್ಶನೀಯ ವ್ಯಕ್ತಿತ್ವದ ಕಾಂತೀಯ ಶಕ್ತಿ ಸರ್ವರಲ್ಲೂ ಭಾವ ಆದ್ರತೆ ಉಂಟಾಗಿಸಿದೆ ಎಂದು ಪೆರಡಾಲ ಶ್ರೀಉದನೇಶ್ವರ ಕ್ಷೇತ್ರದ ಟ್ರಸ್ಟಿ, ನೋಟರಿ,ನ್ಯಾಯವಾದಿ ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು. 

           ಅವರು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ತುಳುವೆರೆ ಆಯನೋ ಕೂಟ ಏರ್ಪಡಿಸಿದ ಸರ್ವಪಕ್ಷ ಸಾರ್ವಜನಿಕ ಸಂತಾಪ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು. 

         ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಬದಿಯಡ್ಕ ಗ್ರಾ.ಪಂ.ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶ್ಯಾಂ ಪ್ರಸಾದ್ ಮಾನ್ಯ, ಈಶ್ವರ ಮಾಸ್ತರ್ ಪೆರಡಾಲ, ಮೊಗೇರ ಸಮಾಜದ ಮುಂದಾಳು ರಾಮಪ್ಪ ಮಂಜೇಶ್ವರ, ಕೆಡೆಂಜಿ ಶ್ರೀಮಹಾವಿಷ್ಣು ಕ್ಷೇತ್ರದ ಸೇವಾ ಸಮಿತಿಯ ರಾಮ ಮುರಿಯಂಕೂಡ್ಲು, ಅನಂತ ಬರ್ಲ, ಶ್ಯಾಮ ಆಳ್ವ, ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಸುಬ್ರಹ್ಮಣ್ಯ ಭಟ್, ಬ್ಯಾಂಕ್ ಪ್ರಬಂಧಕಿ ಪುಷ್ಪಲತಾ, ಬಾಲಕೃಷ್ಣ ಏಣಿಯರ್ಪು, ಸತೀಶ್ ಆಚಾರ್ಯ ಬದಿಯಡ್ಕ, ಚನಿಯಪ್ಪ,  ನಿವೃತ್ತ ಶಿಕ್ಷಕ ನಾರಾಯಣ ಭಟ್ ಮೈರ್ಕಳ,ದಸ್ತಾವೇಜು ಬರಹಗಾರ ಕರಿಂಬಿಲ ಲಕ್ಷ್ಮಣ ಪ್ರಭು,ಸುಬ್ರಹ್ಮಣ್ಯ ಭಟ್ ಮುನಿಯೂರು,ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ  ಡಾ.ಶ್ರೀಶ ಕುಮಾರ ಪಂಜಿತ್ತಡ್ಕ, ಗೀತಾ ಎಂ.ಭಟ್, ಅಂಗನವಾಡಿ ಅಧ್ಯಾಪಕಿ ಶ್ರೀಜಾ ಬಾರಡ್ಕ, ಪುರುμÉೂೀತ್ತಮ ಆಚಾರ್ಯ ಬದಿಯಡ್ಕ, ಮೊಗೇರ ಸರ್ವಿಸ್ ಸೊಸೈಟಿಯ ಕೆ.ಕೆ.ಸ್ವಾಮಿಕೃಪಾ, ಅಂಬೇಡ್ಕರ್ ವಿಚಾರ ವೇದಿಕೆಯ ನಾರಾಯಣ ಬಾರಡ್ಕ,ರಾಮ ಪಟ್ಟಾಜೆ, ನಿವೃತ್ತ ಗ್ರಾಮಧಿಕಾರಿ ಕೃಷ್ಣ ದರ್ಬೆತ್ತಡ್ಕ,ಧ.ಗ್ರಾ.ಯೋಜನೆಯ ಮೇಲ್ವಿಚಾರಕ ದಿನೇಶ್ ಕೊಕ್ಕಡ,  ಜನಜಾಗೃತಿ ವೇದಿಕೆಯ ಅಖಿಲೇμï, ಶಿಕ್ಷಕರಾದ ರಾಜೇಶ್ ಅಗಲ್ಪಾಡಿ,ನಿರಂಜನ ರೈ ಪೆರಡಾಲ,ವಿ.ಹಿಂ.ಪ. ಮುಂದಾಳು ಜಯಂತಿ ಚೆಟ್ಟಿಯಾರ್ ಬದಿಯಡ್ಕ, ಮಾಜಿ ಗ್ರಾ.ಪಂ.ಸದಸ್ಯ ಗಂಗಾಧರ ಗೋಳಿಯಡ್ಕ, ಬೊಳಿಕೆ ಜಾನಪದ ಕಲಾ ತಂಡದ ಶಂಕರ ಸ್ವಾಮಿಕೃಪಾ, ಗಾಯಕ ರತ್ನಾಕರ ಎಸ್.ಓಡಂಗಲ್ಲು, ವಸಂತ ಬಾರಡ್ಕ ಮೊದಲಾದವರು ಮಾತನಾಡಿದರು. ತುಳುವೆರೆ ಆಯನೋ ಕೂಟದ ಪ್ರ.ಕಾರ್ಯದರ್ಶಿ ಜಯ ಮಣಿಯಂಪಾರೆ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries