ಕಾಸರಗೋಡು: ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಡಾ. ಶೇಖ್ ದರ್ವೇಶ್ ಸಾಹೇಬ್ ಅವರು ಶುಕ್ರವಾರ ಕಾಸರಗೋಡಿಗೆ ಭೇಟಿ ನೀಡಿದರು. ಕಾಞಂಗಾಡಿನಲ್ಲಿ ಇತ್ತೀಚೆಗೆ ಯೂತ್‍ಲೀಗ್ ಕಾರ್ಯಕರ್ತರು ನಡೆಸಿದ ರ್ಯಾಲಿಯಲ್ಲಿ ಕೋಮು ದ್ವೇಷ ಹರಡುವ ರೀತಿಯ ಘೋಷಣೆ ಹಿನ್ನೆಲೆಯಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಹಾಗೂ ತನಿಖೆಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.
ಈ ಸಂದರ್ಭ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಸಭೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ಬಗ್ಗೆಯೂ ಚರ್ಚಿಸಿರುವ ಬಗ್ಗೆ ಮಾಹಿತಿಯಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಡಾ. ಶೇಖ್ ದರ್ವೇಶ್ ಸಾಹೇಬ್ ಅವರನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನೇತೃತ್ವದಲ್ಲಿ ಗೌರವ ವಂದನೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಕಣ್ಣೂರು ಐ.ಜಿ ನೀರಜ್ ಕುಮಾರ್ ಗುಪ್ತಾ, ಡಿಐಜಿ, ಎಎಸ್‍ಪಿ, ಡಿವೈಎಸ್‍ಪಿ, ಎಂಎಆರ್ ಎಸ್‍ಎಚ್‍ಓ ಗಳು ಮತ್ತಿತರರು ಉಪಸ್ಥಿತರಿದ್ದರು.


