ಕಾಸರಗೋಡು: ಕಾಞಂಗಾಡಿನಲ್ಲಿ ಮುಸ್ಲಿಂಲೀಗ್ ಆಯೋಜಿಸಿದ್ದ ರ್ಯಾಲಿಯಲ್ಲಿ ಕೋಮುದ್ವೇಷ ಪ್ರಚೋದಿಸುವ ಘೋಷಣೆ ಮೊಳಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತೆಕ್ಕೇಪುರ ನಿವಾಸಿ ಪಿ.ಎಂ. ನೌಶಾದ್(42), ಆರಂಗಾಡಿ ನಿವಾಸಿ ಸಮೀರ್(35), ಮಾಣಿಕ್ಕೋತ್‍ನ ಕುಞÂಮಹಮ್ಮದ್(50)ಹಾಗೂ ಒಬ್ಬ ಬಾಲಕ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಒಂಬತ್ತಕೇರಿದೆ. ಇನ್ನೂ ಹಲವು ಮಂದಿ ಆರೋಪಿಗಳಿದ್ದು, ಇವರಿಗಾಗಿ ಹುಡುಕಾಟ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಹಿಂದ ಬಂಧಿತರಾಗಿರುವ ಐದುಮಂದಿ ನ್ಯಾಐಅಂಗಬಂಧನದಲ್ಲಿ ಕಳೆಯುತ್ತಿದ್ದಾರೆ.


