ಕಾಸರಗೋಡು: ಕುಂಬಳೆಯ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ತಂಡವೊಂದು ರ್ಯಾಗಿಂಗ್ ನಡೆಸಿದ ಪರಿಣಾಮ ಕಿರಿಯ ವಿದ್ಯಾರ್ಥಿ, ಮೊಗ್ರಾಲ್‍ಮೈಮುನಾ ನಗರ ನಿವಾಸಿ ಮಹಮ್ಮದ್ ಜಾಫರ್ ಎಂಬಾತ ಗಾಯಗೊಂಡಿದ್ದಾನೆ. ಗಾಯಾಳು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಗುರುವಾರ ಸಂಜೆ ಶಾಲೆಬಿಟ್ಟು ಮನೆಗೆ ತೆರಳುವ ಮಧ್ಯೆ ಪ್ಲಸ್‍ಟು ವಿದ್ಯಾರ್ಥಿಗಳ ತಂಡವೊಂದು ಗೇಟಿನಲ್ಲಿ ತಡೆದು ವಾಚು ಕಟ್ಟಿಕೊಂಡು ಶಾಲೆಗೆ ಆಗಮಿಸಿರುವ ಬಗ್ಗೆ ಪ್ರಶ್ನಿಸಿದ್ದು, ಮುಖ, ತಲೆಗೆ ಹಿಗ್ಗಾಮುಗ್ಗ ಥಳಿಸಿರುವುದಾಗಿ ಗಾಯಾಳು ದೂರಿದ್ದಾನೆ.

