HEALTH TIPS

No title

               ದುಬೈ: ಫ್ರಾನ್ಸ್ ಪ್ರವಾಸ ಮುಗಿಸಿಕೊಂಡು ಗಲ್ಫ್ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಅಬು ಧಾಬಿಯ ಖ್ಯಾತ ಬುರ್ಜ್ ಖಲೀಫಾವನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಭಾರತದ ತ್ರಿವರ್ಣ ಧ್ವಜಗಳ ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು.


               ಬುರ್ಜ್ ಖಲೀಫಾದಲ್ಲಿ ಧ್ವನಿ ಬೆಳಕಿನ ಪ್ರದರ್ಶನ ಅಂಗವಾಗಿ ಗಗನಚುಂಬಿ ಕಟ್ಟಡದಲ್ಲಿ ತ್ರಿವರ್ಣ ಧ್ವಜದ ದೀಪದ ಅಲಂಕಾರ ಜೊತೆಗೆ ಪ್ರಧಾನಿ ಮೋದಿಯವರ ಚಿತ್ರಗಳನ್ನು ಸಹ ಪ್ರದರ್ಶನಗೊಳಿಸಲಾಯಿತು. ನಂತರ ಅದರಲ್ಲಿ ಪ್ರಧಾನಿ ಮೋದಿಯವರಿಗೆ ಸ್ವಾಗತ ಎಂದು ಅಕ್ಷರದಲ್ಲಿ ಬರೆಯಲಾಗಿತ್ತು.

             ದುಬೈಯಲ್ಲಿರುವ ಪ್ರಖ್ಯಾತ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಪ್ರಖ್ಯಾತ ಪ್ರವಾಸಿ ಆಕರ್ಷಣೆಯ ಕೇಂದ್ರ. ಅಬುಧಾಬಿ ಅಧ್ಯಕ್ಷರ ಪ್ರೀತಿಯ ಭವ್ಯ ಸ್ವಾಗತಕ್ಕೆ ಮನಸೋತ ಪ್ರಧಾನಿ ಮೋದಿ, ಇಂದು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡದ್ದಕ್ಕೆ ರಾಜಕುಮಾರ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಗಲ್ಫ್ ರಾಷ್ಟ್ರ ಭೇಟಿ ಸಂದರ್ಭದಲ್ಲಿ ಅನೇಕ ದ್ವಿಪಕ್ಷೀಯ ಮಾತುಕತೆ ಪ್ರಮುಖ ಅಜೆಂಡಾವಾಗಿದೆ.

              ಈ ಹಿಂದೆ ಯುಎಇಯ ವಿದೇಶಿ ವ್ಯವಹಾರಗಳ ರಾಜ್ಯ ಸಚಿವ ಡಾ ತಾನಿ ಬಿನ್ ಅಹ್ಮದ್ ಅಲ್ ಝೆಯೌದಿ ಸಂದರ್ಶನವೊಂದರಲ್ಲಿ ಈ ಹಿಂದೆ,ಯುಎಇ ಮತ್ತು ಭಾರತದ ತೈಲೇತರ ವ್ಯಾಪಾರ 2030ರ ಹೊತ್ತಿಗೆ 100 ಶತಕೋಟಿ ಡಾಲರ್ ಗೆ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ. ಯುಎಇ-ಭಾರತ ವಿಸ್ತಾರವಾದ ಆರ್ಥಿಕ ಸಹಭಾಗಿತ್ವ ಒಪ್ಪಂದ(CEPA) ಬೆಳವಣಿಗೆ ಮತ್ತು ಅವಕಾಶಕ್ಕೆ ಹೊಸ ಯುಗವನ್ನು ನೀಡಲಿದೆ ಎಂದು ಹೇಳಿದ್ದಾರೆ.

                   ಸಿಇಪಿಎ ಒಪ್ಪಂದ: ಇದು ಭಾರತ ಮತ್ತು ಯುಎಇ ನಡುವೆ ಫೆಬ್ರವರಿ 18, 2022ರಂದು ಮಾಡಿಕೊಂಡ ಒಪ್ಪಂದವಾಗಿದ್ದು ಮೇ 1, 2022ರಂದು ಜಾರಿಗೆ ಬಂದಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯನ್ ನಡುವೆ ಆದ ಒಪ್ಪಂದವಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries