HEALTH TIPS

ಹಿರಿಯ ಕಾಂಗ್ರೆಸ್ ನಾಯಕ ವಕ್ಕಂ ಪುರುಷೋತ್ತಮ್ ನಿಧನ

              ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ವಕ್ಕಂ ಪುರುಷೋತ್ತಮನ್ (96) ನಿಧನರಾಗಿದ್ದಾರೆ. ದೈಹಿಕ ನ್ಯೂನತೆಯಿಂದಾಗಿ ಅವರು ವಿಶ್ರಾಂತಿಯಲ್ಲಿದ್ದರು. ಅವರು ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ವಕ್ಕಂ ಪುರುಷೋತ್ತಮನ್ ಅವರು ಮಿಜೋರಾಂ ಮತ್ತು ತ್ರಿಪುರಾ ರಾಜ್ಯಪಾಲರಾಗಿ, ಲೋಕಸಭಾ ಸದಸ್ಯರಾಗಿ ಮತ್ತು ರಾಜ್ಯ ಕ್ಯಾಬಿನೆಟ್ ಇಲಾಖೆಯ ಸಚಿವರಾಗಿಯೂ ಗಮನಾರ್ಹ ವ್ಯಕ್ತಿಯಾಗಿದ್ದರು. 

           ಅವರು ಏಪ್ರಿಲ್ 12, 1928 ರಂದು ತಿರುವನಂತಪುರಂ ಜಿಲ್ಲೆಯ ಅಟ್ಟಿಂಗಲ್ ತಾಲೂಕಿನ ವಕ್ಕಂ ಗ್ರಾಮದಲ್ಲಿ ಭಾನು ಪಣಿಕ್ಕರ್ ಮತ್ತು ಭವಾನಿ ದಂಪತಿಗಳ ಪುತ್ರರಾಗಿ ಜನಿಸಿದ್ದರು. 1953ರಲ್ಲಿ ವಕ್ಕಂ ಗ್ರಾಮ ಪಂಚಾಯಿತಿ ಸದಸ್ಯರಾದರು. ನಂತರ ತಿರುವನಂತಪುರದ ಡಿಸಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದರು.

            ವಿದ್ಯಾರ್ಥಿ ರಾಜಕಾರಣದ ಮೂಲಕ ಸಾರ್ವಜನಿಕ ರಂಗಕ್ಕೆ ಪಾದಾರ್ಪಣೆಗೈದಿದ್ದರು.  ಮೊದಲ ಪಂಚಾಯತ್ ಚುನಾವಣೆಯಲ್ಲಿ ವಕ್ಕಂ ಪಂಚಾಯತಿ ಸದಸ್ಯರಾದರು. ನಂತರ ರಾಜಕೀಯ ತೊರೆದು ಅಲಿಘರ್ ವಿಶ್ವವಿದ್ಯಾನಿಲಯದಲ್ಲಿ  ಕಾನೂನು ವ್ಯಾಸಂಗ ಮಾಡಿ  ವಕೀಲರಾದರು. ರಾಜ್ಯ ಸಚಿವ ಸಂಪುಟದಲ್ಲಿ ಮೂರು ಬಾರಿ, ಲೋಕಸಭೆಯಲ್ಲಿ ಎರಡು ಬಾರಿ ಹಾಗೂ ರಾಜ್ಯಪಾಲರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದರು. ಅವರು ಐದು ಬಾರಿ ವಿಧಾನಸಭೆಯ ಸದಸ್ಯರಾಗಿದ್ದರು. ಪುರುಷೋತ್ತಮ್ ಅವರು ಅತಿ ಹೆಚ್ಚು ಬಾರಿ (ಎರಡು ಬಾರಿ) ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ ದಾಖಲೆ ಹೊಂದಿದ್ದಾರೆ. 2006 ರಲ್ಲಿ, ಅವರು ಮೊದಲ ಉಮ್ಮನ್ ಚಾಂಡಿ ಸಂಪುಟದಲ್ಲಿ ಹಣಕಾಸು, ಅಬಕಾರಿ ಮತ್ತು ಲಾಟರಿ ಇಲಾಖೆಗಳ ಉಸ್ತುವಾರಿ ವಹಿಸಿದ್ದರು. ಮುಖ್ಯಮಂತ್ರಿಯಾಗದೇ ಕ್ಲಿಫ್ ಹೌಸ್ ನಲ್ಲಿ ವಾಸಿಸಿದ ಮೊದಲ ವ್ಯಕ್ತಿ ಕೂಡಾ ಪುರುಷೋತ್ತಮನ್ ಅವರಾಗಿದ್ದಾರೆ. ಉಮ್ಮನ್ ಚಾಂಡಿ ಸ್ವಿಟ್ಜಲೆರ್ಂಡ್‍ನ ದಾವೋಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವಕ್ಕಂ ಪ್ರಭಾರ ಮುಖ್ಯಮಂತ್ರಿಯಾಗಿದ್ದರು. ಅವರು 1994 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ವಹಿಸಿಕೊಂಡರು ಮತ್ತು 2011 ರಲ್ಲಿ ಮಿಜೋರಾಂ ರಾಜ್ಯಪಾಲರಾಗಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries