HEALTH TIPS

ಒಪ್ಪಂದ ಪ್ರಕಾರ ರಾಸಾಯನಿಕ ಶಸ್ತ್ರಾಸ್ತ್ರ ಸಂಪೂರ್ಣ ನಾಶ: ಬೈಡನ್

             ವಾಷಿಂಗ್ಟನ್‌: ಮೂರು ದಶಕದಷ್ಟು ಹಳೆಯದಾದ ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಂದದ ಪ್ರಕಾರ, ದಾಸ್ತಾನು ಹೊಂದಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಘೋಷಿಸಿದ್ದಾರೆ.

                 'ದಾಸ್ತಾನಿನಲ್ಲಿ ಬಾಕಿ ಉಳಿದಿದ್ದ ಶಸ್ತ್ರಾಸ್ತ್ರಗಳನ್ನು ಅಮೆರಿಕವು ಸುರಕ್ಷಿತವಾಗಿ ನಾಶಪಡಿಸಿದೆ ಎಂದು ಘೋಷಿಸಲು ಹೆಮ್ಮೆ ಪಡುತ್ತೇನೆ.

                 ಈ ಮೂಲಕ ಭೀತಿ ಮತ್ತು ರಾಸಾಯನಿಕ ಶಸ್ತ್ರಾಸ್ತ್ರ ಮುಕ್ತ ಜಗತ್ತಿಗೆ ಒಂದು ಹೆಜ್ಜೆ ಹತ್ತಿರವಾಗಿದ್ದೇವೆ' ಎಂದು ಹೇಳಿದ್ದಾರೆ.

              1993ರಲ್ಲಿ ಮಾಡಿಕೊಳ್ಳಲಾಗಿ‌ದ್ದ ಈ ಒಪ್ಪಂದ 1997ರಲ್ಲಿ ಕಾರ್ಯರೂಪಕ್ಕೆ ಬಂದಿತ್ತು. ಈ ವರ್ಷದ ಸೆಪ್ಟೆಂಬರ್‌ ಒಳಗಾಗಿ ನಾಶಪಡಿಸುವಂತೆ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಸಂಘಟನೆಯು (ಒಪಿಸಿಡಬ್ಲ್ಯು) ಅಮೆರಿಕಕ್ಕೆ ಹೇಳಿತ್ತು. ಅದರಂತೆ ಅಮೆರಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ.

                     ಒಪ್ಪಂದದ ಪ್ರಕಾರ ಸಂಪೂರ್ಣ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ ದೇಶಗಳಲ್ಲಿ ಅಮೆರಿಕ ಕಡೆ ದೇಶವಾಗಿದೆ. ಕೆಲ ದೇಶಗಳು ಗೌಪ್ಯವಾಗಿ ಶಸ್ತ್ರಾಸ್ತ್ರ ದಾಸ್ತಾನು ಹೊಂದಿರುವ ಶಂಕೆಯೂ ಇದೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries