HEALTH TIPS

ಲಂಚ ಪ್ರಕರಣದಲ್ಲಿ ಬಂಧಿತ ವೈದ್ಯರ ಅಮಾನತು

              ತ್ರಿಶೂರ್: 3000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಜಿಲೆನ್ಸ್‍ಗೆ ಸಿಕ್ಕಿಬಿದ್ದ ವೈದ್ಯನನ್ನು ಅಮಾನತು ಮಾಡಲಾಗಿದೆ. ಮುಲುಂಗುನ್ನತುಕ್ಕಾವ್ ಸÀರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಮೂಳೆಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ಡಾ. ಶೆರ್ರಿ ಐಸಾಕ್ ಅವರನ್ನು ಅಮಾನತುಗೊಳಿಸಲಾಗಿದೆ. ಪಾಲಕ್ಕಾಡ್ ನಿವಾಸಿಯೊಬ್ಬರ ದೂರಿನ ಆಧಾರದ ಮೇಲೆ ವಿಜಿಲೆನ್ಸ್ ಕ್ರಮ ಕೈಗೊಂಡಿದೆ. 

            ಡಾ.ಶೆರಿ ಶಸ್ತ್ರಚಿಕಿತ್ಸೆ ಮಾಡಲು ಲಂಚ ಕೇಳಿದ್ದರು. ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದರು. ಶಸ್ತ್ರಚಿಕಿತ್ಸೆಯ ದಿನವನ್ನು ತಿಳಿಸಲು ಖಾಸಗೀ ಚಿಕಿತ್ಸೆ ನೀಡುವ ಒಟ್ಟುಪಾರದಲ್ಲಿರುವ ಕ್ಲಿನಿಕ್‍ಗೆ 3000 ರೂಪಾಯಿಗಳನ್ನು ಕಳುಹಿಸಲು ಶೆರ್ರಿ ಕೇಳಿದರು. ಈ ವೇಳೆ ರೋಗಿ ಕಡೆಯವರು ವಿಜಿಲೆನ್ಸ್‍ಗೆ ಮಾಹಿತಿ ನೀಡಿದ್ದಾರೆ.

               ದೂರಿನ ಆಧಾರದ ಮೇಲೆ ವಿಜಿಲೆನ್ಸ್ ವೈದ್ಯರಿಗೆ ಫಿನಾಲ್ಫ್ತಾಲಿನ್ ಲೇಪಿತ ಕರೆನ್ಸಿ ಬಂಡಲ್ ನೀಡಲು ದೂರುದಾರರನ್ನು ಕಳುಹಿಸಿದ್ದರು. ಲಂಚ ಸ್ವೀಕರಿಸುವಾಗ ಶೆರ್ರಿ ಐಸಾಕ್ ವಿಜಿಲೆನ್ಸ್‍ಗೆ ಸಿಕ್ಕಿಬಿದ್ದಿದ್ದಾನೆ. ಬಂಧನದ ನಂತರ ವಿಜಿಲೆನ್ಸ್ ಅವರ ಮನೆಯಲ್ಲಿ ಶೋಧ ನಡೆಸಿದಾಗ 15 ಲಕ್ಷದ ನೋಟುಗಳ ಬಂಡಲ್‍ಗಳು ಪತ್ತೆಯಾಗಿವೆ. ಕೊಚ್ಚಿಯ ಮನೆಯಿಂದಲೂ ಸುಮಾರು ಒಂದೂವರೆ ಲಕ್ಷ ರೂ.ಪತ್ತೆಹಚ್ಚಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries