ತಿರುವನಂತಪುರಂ: ಆನ್‍ಲೈನ್ ಗೇಮಿಂಗ್, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳ ಮೇಲೆ ಶೇ.28ರಷ್ಟು ಜಿಎಸ್‍ಟಿ ವಿಧಿಸುವ ಜಿಎಸ್‍ಟಿ ಮಂಡಳಿಯ ನಿರ್ಧಾರವು ರಾಜ್ಯಕ್ಕೆ ಅನುಕೂಲಕರವಾಗಿದೆ ಎಂದು ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಹೇಳಿದ್ದಾರೆ. ಕೇರಳ ಸರ್ಕಾರವು ಈ ವಿಷಯದಲ್ಲಿ ದೃಢವಾದ ನಿಲುವನ್ನು ತೆಗೆದುಕೊಂಡಿದ್ದರಿಂದ ಇದು ಸಂಭವಿಸಿದೆ ಎಮದವರು ತಿಳಿಸಿರುವರು.
ಪೂರ್ಣ ಮೌಲ್ಯದ ಮೇಲೆ ದರ ನಿಗದಿಪಡಿಸಬೇಕು ಎಂಬುದು ರಾಜ್ಯದ ಬೇಡಿಕೆಯಾಗಿತ್ತು’ ಎಂದು ಸಚಿವರು ರಾಜ್ಯ ಲಾಟರಿ ಇಲಾಖೆಯ ನೂತನ ಲಾಂಛನ ಹಾಗೂ ಲೋಗೋ ಮತ್ತು ಜಾಹೀರಾತುಗಳನ್ನು ಬಿಡುಗಡೆಗೊಳಿಸಿ ಅವರು ಹೇಳಿದರು. ಈ ನಿರ್ಧಾರವು ರಾಜ್ಯ ಲಾಟರಿಗಳ ಹಿತಾಸಕ್ತಿಗಳಿಗೆ ಸಹಾಯ ಮಾಡುತ್ತದೆ. ಇಲ್ಲವೇ ಲಾಟರಿ ಮೇಲಿನ ತೆರಿಗೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.
ಅಸಂಘಟಿತ ವಲಯದಲ್ಲಿ ಲಾಟರಿ ಅತಿ ದೊಡ್ಡ ಉದ್ಯೋಗದಾತ ಕಂಪೆನಿಯಾಗಿದೆ. ಇದು ಅನೇಕ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಇಲಾಖೆಯು ವರ್ಷಕ್ಕೆ 7,000 ಕೋಟಿ ರೂ.ಗಳ ಬಹುಮಾನಗಳನ್ನು ವಿತರಿಸುತ್ತದೆ. ಏಜೆಂಟರ ಕಮಿಷನ್ ಆಗಿ 3,000-3,500 ಕೋಟಿ ರೂ. ನೀಡಲಾಗುತ್ತಿದೆ.
ಲಾಟರಿಯ ಹೊಸ ಲಾಂಛನವನ್ನು ವ್ಯಂಗ್ಯಚಿತ್ರಕಾರ ಮತ್ತು ಚಿತ್ರಕಲಾವಿದ ರೆತೀಶ್ ರವಿ ವಿನ್ಯಾಸಗೊಳಿಸಿದ್ದು, ಲೋಗೋವನ್ನು ಸತ್ಯಪಾಲ್ ಶ್ರೀಧರ್ ಅವರು ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ, ಸಮಾರಂಭದಲ್ಲಿ ಎರಡು ಹೊಸ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಯಿತು. ಲಾಟರಿ ನಿರ್ದೇಶಕ ಅಬ್ರಹಾಂ ರೆನ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಲಾಟರಿಗಳ ಹೆಸರಿನಲ್ಲಿ ನಕಲಿ ಅಪ್ಲಿಕೇಶನ್‍ಗಳು ಮತ್ತು ವೆಬ್‍ಸೈಟ್‍ಗಳ ವಿರುದ್ಧ ರೆನ್ ಜನರಿಗೆ ಎಚ್ಚರಿಕೆ ನೀಡಿದರು. ಅವರ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದಿರುವರು.





