ನವದೆಹಲಿ: ದಿವಂಗತ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ (ಎನ್‌ಟಿಆರ್) ಜನ್ಮ ಶತಮಾನೋತ್ಸವ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಣ್ಯ ಬಿಡುಗಡೆ ಮಾಡಿದರು. ಇದು ₹ 100 ಮೌಲ್ಯದ ನಾಣ್ಯ ಎನ್ನಲಾಗಿದೆ.
0
samarasasudhi
ಆಗಸ್ಟ್ 28, 2023
ನವದೆಹಲಿ: ದಿವಂಗತ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ (ಎನ್‌ಟಿಆರ್) ಜನ್ಮ ಶತಮಾನೋತ್ಸವ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಣ್ಯ ಬಿಡುಗಡೆ ಮಾಡಿದರು. ಇದು ₹ 100 ಮೌಲ್ಯದ ನಾಣ್ಯ ಎನ್ನಲಾಗಿದೆ.
ಎನ್‌ಟಿಆರ್ ಅವರು, ರಾಮಾಯಣ ಮಹಾಭಾರತದ ಪಾತ್ರಗಳಲ್ಲಿ ಅಭಿನಯ ಮಾಡಿ ಜನಮಾನಸದಲ್ಲಿ ನೆಲೆಗೊಂಡಿದ್ದರು. ಅಲ್ಲದೇ ಅವರು ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ಜನರ ನೋವು-ನಲಿವುಗಳಿಗೆ ಧ್ವನಿಯಾಗಿದ್ದರು ಎಂದು ಮುರ್ಮು ಅವರು ನಾಣ್ಯ ಬಿಡುಗಡೆ ಮಾಡಿ ಮಾತನಾಡಿದರು.
ಎನ್‌ಟಿಆರ್ ಅವರು ರಾಜಕೀಯಕ್ಕೆ ಧುಮುಕಿ ಒಬ್ಬ ಅಪ್ರತಿಮ ನಾಯಕನಾಗಿ ಜನರ ಸೇವೆ ಮಾಡಿದರು. ಅವರು ಮಾಡಿದ ಅನೇಕ ಜನಪರ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯ. ಅವರು ತೆಲುಗು ಜನರ ಹೃದಯ ಗೆದ್ದಿದ್ದರು ಎಂದು ಕೊಂಡಾಡಿದರು.
ಇದೇ ವೇಳೆ ಮುರ್ಮು ಅವರು ನಾಣ್ಯ ಹೊರ ತಂದಿರುವುದಕ್ಕೆ ಹಣಕಾಸು ಇಲಾಖೆಯನ್ನು ಅಭಿನಂದಿಸಿದರು. 1923 ರ ಮೇ 28 ರಂದು ಎನ್‌ಟಿಆರ್ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ್ದರು. ಮೂರು ಬಾರಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.