ಕುಂಬಳೆ: ಭಾರತೀಯ ರೈಲ್ವೇಯ ಮೊದಲ ಮಹಿಳಾ ಟ್ರ್ಯಾಕ್ ಮಹಿಳೆ ನಿವೃತ್ತಿಯಾಗಿದ್ದಾರೆ. ವಿ. ರಮಣಿ ಅವರು 41 ವರ್ಷಗಳ ಸೇವೆ ಸಲ್ಲಿಸಿ ಪಯ್ಯನೂರು ವಿಭಾಗದಿಂದ ನಿವೃತ್ತರಾಗುತ್ತಿದ್ದಾರೆ.
‘ಟ್ರ್ಯಾಕ್ ವುಮೆನ್’ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ರಮಣಿ ಎಂಬ ಹೆಗ್ಗಳಿಕೆ ಇವರದಾಗಿದೆ.
19 ನೇ ವಯಸ್ಸಿನಲ್ಲಿ, ರಮಣಿ ನಿಲ್ಲಿಸಿದ ರೈಲುಗಳಿಗೆ ನಿರ್ವಹಣಾ ಕೆಲಸಗಾರರಾಗಿ ತಾತ್ಕಾಲಿಕ ಕರ್ತವ್ಯಕ್ಕೆ ನಿಯೋಜಿತರಾದವರು. ಬಳಿಕ ಅವರು ಟ್ರ್ಯಾಕ್ ಮಹಿಳೆಯಾಗಿ ಪದೋನ್ನತಿಗೊಂಡರು. ಟ್ರೌಸರ್ ಧರಿಸಬೇಕಿದ್ದರಿಂದ ಟ್ರ್ಯಾಕ್ ಮ್ಯಾನ್ ಯೂನಿಫಾರಂ ಬಳಸಲು ಸಾಧ್ಯವಿಲ್ಲ ಎಂಬಕಾರಣ ರಮಣಿಗೆ ಸೀರೆಯನ್ನು ಸಮವಸ್ತ್ರವಾಗಿ ನೀಡಲಾಯಿತು.
ಅಲುಗಾಡುತ್ತಿರುವ ಟ್ರ್ಯಾಕ್‍ನಲ್ಲಿ ಜಲ್ಲಿಗಳನ್ನು ಸರಿಪಡಿಸುವುದು ಮತ್ತು ಬಿರುಕು ಕಂಡುಬಂದರೆ ರೈಲು ನಿಲ್ಲಿಸಲು ಸಿಗ್ನಲ್ ನೀಡುವುದು ರಮಣಿ ಅವರ ಮುಖ್ಯ ಕೆಲಸವಾಗಿತ್ತು. ಇದೇ 31ರಂದು ಪಯ್ಯನೂರು ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟ್ರ್ಯಾಕ್ ಮಹಿಳೆ ಅಧಿಕೃತವಾಗಿ ರೈಲ್ವೇ ಬೀಳ್ಕೊಡಲಿದೆ.

.jpg)
