ಮುಳ್ಳೇರಿಯ: ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ನಗದು ಪುರಸ್ಕಾರ ವಿತರಣೆ ಅಗೋಸ್ತು 27 ಭಾನುವಾರ ಪೂರ್ವಾಹ್ನ 10 ಕ್ಕೆ ಮುಳ್ಳೇರಿಯ ಯಾದವ ಸಭಾ ಭವನದಲ್ಲಿ ಜರಗಲಿರುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಾಗೂ ಸಿಬಿಎಸ್‍ಇ ಪರೀಕ್ಷೆಯಲ್ಲಿ ಎಪ್ಲಸ್ ಪಡೆದ ಯಾದವ ಸಮುದಾಯದ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಗುವುದು. ಯಾದವ ಸಭಾ ತಾಲೂಕು ಸಮಿತಿ ಕಾರ್ಯದರ್ಶಿ ನಾರಾಯಣ ಮಣಿಯಾಣಿ ಚೇರ್ಕೂಡ್ಲು ಸ್ವಾಗತಿಸಲಿದ್ದಾರೆ. ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಅಧ್ಯಕ್ಷತೆ ವಹಿಸುವರು. ರಾಜ್ಯ ಸಮಿತಿ ಅಧ್ಯಕ್ಷ ಶಿವರಾಮ ಮೇಸ್ತ್ರಿ ಉದ್ಘಾಟಿಸುವರು. ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪೂರಕಳಿ ಪಣಿಕ್ಕರ್ ಕುಂಞÂಕಣ್ಣನ್ ಬಾಳಕಂಡಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಮಂಗಳೂರು ಯೇನೆಪೋಯ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ. ಕಿಶೋರ್ ಕುಮಾರ್ ಕುಂಬಳೆ ಸನ್ಮಾನಿಸಲಿದ್ದಾರೆ. ಅಖಿಲ ಕೇರಳ ಯಾದವ ಸಭಾ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಬಾಬು ಮಾಣಿಯೂರ್ ನಗದು ಪುರಸ್ಕಾರ ವಿತರಣೆ ಮಾಡಲಿದ್ದಾರೆ. ಉದಯಕುಮಾರ್ ಬದಿಯಡ್ಕ, ಶಿವಪ್ರಸಾದ ಕಡಾರು, ಅರವಿಂದಾಕ್ಷನ್ ನೆಲ್ಲಿಮೊಟ್ಟ, ಸೀತಾರಾಮ ಕೂಟ್ಲುಂಗಾಲ್, ರೋಹಿಣಿ ಚಂದ್ರನ್, ದಾಮೋದರನ್ ಕೊಟ್ಟಂಗುಳಿ, ಬಾಲಕೃಷ್ಣ ಕೇಳೋಟ್, ಕರುಣಾಕರ ಬದಿಯಡ್ಕ, ಪದ್ಮನಾಭ ಮಣಿಯಾಣಿ ಮವ್ವಾರು ಶುಭಾಶಂಸನೆಗೈಯಲಿದ್ದಾರೆ. ಯಾದವ ಸಭಾ ತಾಲೂಕು ಸಮಿತಿ ಜೊತೆಕಾರ್ಯದರ್ಶಿ ಅಪ್ಪಕುಂಞ ಕೊಣಲ ವಂದಿಸುವರು.

