ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ 14ನೇ ವಾರ್ಡ್ ಪಟ್ಟಾಜೆ ಅಂಗನವಾಡಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ವಾರ್ಡು ಸದಸ್ಯ ಶ್ಯಾಮಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಕಾರ್ಯದರ್ಶಿ ರಾಜೇಂದ್ರನ್ ಧ್ವಜಾರೋಹಣಗೈದರು. ಐಸಿಡಿಯಸ್ ಮೇಲ್ವಿಚಾರಕಿ ಶಂನಿಷಾ ಅತಿಥಿಯಾಗಿ ಭಾಗವಹಿಸಿದ್ದರು.
ಗ್ರಾ.ಪಂ. ಮಾಜಿ ಸದಸ್ಯೆ ಕಮಲಾ ಪಟ್ಟಾಜೆ, ಕುಂಞÂಕಣ್ಣ ಗುರುಸ್ವಾಮಿ, ಲೋಹಿತಾಕ್ಷನ್ ಪಟ್ಟಾಜೆ, ಐತ್ತಪ್ಪ ಪಟ್ಟಾಜೆ, ಪ್ರಜ್ವಲ್ ಚುಕ್ಕಿನಡ್ಕ, ರಂಜಿತಾ ಪಟ್ಟಾಜೆ ಶುಭಾಶಂಶನೆಗೈದರು. 14ನೇ ವಾರ್ಡಿನ ಹಸಿರು ಕ್ರಿಯಾಸೇನೆ ಸದಸ್ಯೆಯರಾದ ರೂಪ, ಶ್ರೀಜ, ಸತ್ಯಪ್ರೇಮ ಅವರನ್ನು ಹಾಗೂ 2022 - 23ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕ ಗಳಿಸಿದ ಸುಹನ್ ಶೆಟ್ಟಿ ಮತ್ತು ದೀಪಾ.ಸಿ.ಯಚ್ ಅವರನ್ನು ಅಭಿನಂದಿಸಲಾಯಿತು. ಅರುಣೋದಯ ಕ್ಲಬ್ ಚುಕ್ಕಿನಡ್ಕ, ಶಾಸ್ತ ಕ್ಲಬ್, ಷಣ್ಮುಖ ಕ್ಲಬ್‍ನ ಸದಸ್ಯರು, ಸಿಡಿಯಸ್, ಎಡಿಯಸ್, ಕುಟುಂಬಶ್ರೀ ಸದಸ್ಯೆಯರು ಭಾಗವಹಿಸಿದ್ದರು. ಅಂಗನವಾಡಿ ಅಧ್ಯಾಪಕಿ ಚಿತ್ರಕಲಾ ಸ್ವಾಗತಿಸಿ, ಸಹಾಯಕಿ ಲೀಲಾ ಪಟ್ಟಾಜೆ ವಂದಿಸಿದರು. ಅಂಗನವಾಡಿಯ ಪುಟಾಣಿ ಮಕ್ಕಳು ಪ್ರಾರ್ಥನೆ ಹಾಡಿದರು.

.jpg)
